ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಅಖಿಲ ಭಾರತ ಕಾರ್ಮಿಕರ ಮುಷ್ಕರದ ಅಂಗವಾಗಿ ಸೋಮವಾರದಂದು ಬೈಂದೂರು ತಾಲೂಕು ಸಿಐಟಿಯು ಕಾರ್ಮಿಕ ಸಂಘದ ನೇತೃತ್ವದಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೈಂದೂರು ಪ್ರಮುಖ ಬೀದಿಯಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನಾ,ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ್ ಜ್ಯೋತಿ ಲಕ್ಷ್ಮಿ ಯವರ ಮೂಲಕ ಪ್ರಧಾನ ಮಂತ್ರಿಗೆ ಮನವಿಯನ್ನು ನೀಡಲಾಯಿತು.
ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ತೈಲ ಬೆಲೆ ಏರಿಕೆ ತಡೆಗಟ್ಟಬೇಕು, ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಪಡಿಸಬೇಕು. ನರೇಗಾ ಕೂಲಿ ಹೆಚ್ಚಳ ಸ್ಕೀಂ ನೌಕರರಿಗೆ ಕನಿಫ್ಟ ವೇತನ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯ ಹೆಚ್ಚಿಸಬೇಕು ಇತ್ಯಾದಿ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಯಿತು.
ರೊನಾಲ್ಡ್ ರಾಜೇಶ್ ಕ್ವಾಡ್ರಸ್,ಉದಯ ಗಾಣಿಗ ಮೊಗೇರಿ, ಸಿಂಗಾರಿ ನಾವುಂದ, ರಾಜೀವ ಪಡುಕೋಣೆ,ಗಣೇಶ ತೊಂಡೆಮಕ್ಕಿ,ಅಮ್ಮಯ್ಯ ಪೂಜಾರಿ, ಮಂಜು ಪಡುವರಿ,ಮಾಧವ ದೇವಾಡಿಗ ವೆಂಕಟೇಶ್ ಕೋಣಿ, ಲಕ್ಷ್ಮಣ ಯಡ್ತರೆ,ರಮೇಶ್ ಗುಲ್ವಾಡಿ,ವಿಜಯ ಕೊಯಾನಗರ, ಜಯಶ್ರೀ ಪಡುವರಿ, ನಾಗರತ್ನ ನಾಡಾ,ಶೀಲಾವತಿ, ರೋನಿ, ವಿನೋದ ನಜ್ರತ್ ಪಡುವರಿ, ಮೊದಲಾ ದವರು ಹೋರಾಟದ ನೇತೃತ್ವ ವಹಿಸಿದ್ದರು.