ಕುಂದಾಪುರ ಮಿರರ್ ಸುದ್ದಿ…
ಕೋಟ: ಪುರಾಣ ಪ್ರಸಿದ್ಧ ಕ್ಷೇತ್ರ ಕೋಟದ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.
ಇದರ ಭಾಗವಾಗಿ ಶ್ರೀ ಮಹಾಲಿಂಗೇಶ್ವರ ದೇವರ ಸಾನಿಧ್ಯ ವೃದ್ಧಿಗಾಗಿ ಕರ್ಫೂರಾದಿ 84 ದ್ರವ್ಯಯುಕ್ತ ಪಂಚಸಹಿತಪಂಚಶತ ಬ್ರಹ್ಮಕಲಶಾಭಿಷೇಕ, ಸಾನಿಧ್ಯಹೋಮ ಹಾಗೂ ಹೇರಂಬ ಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕ ಹೋಮಾದಿ ಕಾರ್ಯಗಳು, ಅಷ್ಟಾವಧಾನ ಸೇವೆ ಕಾರ್ಯಕ್ರಮಗಳು, ಮಹಾಪೂಜಾ ಕಾರ್ಯಕ್ರಮಗಳು ತಂತ್ರಿಗಳಾದ ಗಣೇಶ್ ಐತಾಳ್ ಸಾಲಿಗ್ರಾಮ ನೇತ್ರತ್ವದಲ್ಲಿ ವೇ.ಮೂ.ಗರಿಕೆಮಠ ರಾಮಪ್ರಸಾದ ಅಡಿಗರ ಪೌರೋಹಿತ್ಯದಲ್ಲಿ ನಡೆಯಿತು. ಅಪರಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ದೇವಳದ ಪೂಜಾಕೈಂಕರ್ಯದಲ್ಲಿ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಅರುಣಾಚಲ ಮಯ್ಯ ದಂಪತಿಗಳು, ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ದಂಪತಿಗಳು ಪಾಲ್ಗೊಂಡರು.
ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಅಧ್ಯಕ್ಷತೆಯಲ್ಲಿ ವಿವಿಧ ಧಾರ್ಮಿಕ ನೆರವೆರಿದವು.
ದೇವಳದ ಟ್ರಸ್ಟಿಗಳಾದ ಅಶೋಕ್ ಶೆಟ್ಟಿ ಕೊಯ್ಕೂರು,ಅಚ್ಯತ್ ಹಂದೆ,ಕೃಷ್ಣ ದೇವಾಡಿಗ,ಬಾಬು ಜಿ,ಸುಫಲ ಶೆಟ್ಟಿ,ಎಂ.ದಿವ್ಯ ಪ್ರಭು,ದಿನೇಶ್ ಆಚಾರ್ಯ, ಅರ್ಚಕ ಪ್ರತಿನಿಧಿ ರವಿ ಐತಾಳ್ ,ಹಿರಿಯರಾದ ಭಾರತಿ ವಿಷ್ಣುಮೂರ್ತಿ ಮಯ್ಯ ಮತ್ತಿತರರು ಪಾಲ್ಗೊಂಡರು.