ಕುಂದಾಪುರ ಮಿರರ್ ಸುದ್ದಿ…
ಕೋಟ :ಯುವ ಸಮುದಾಯಕ್ಕೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಜೊತೆಗೆ ಸಂಸ್ಕಾರ ಶಿಕ್ಷಣ ನೀಡಿ ಎಂದು ಕಾಸರಗೂಡು ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳ ಹೇಳಿದರು.
ಮಣೂರು ಶ್ರೀ ಮಹಾಲಿಂಗೇಶ್ವರ ಹಾಗೂ ಹೇರಂಬ ಶ್ರೀ ಮಹಾಗಣಪತಿ ದೇವಳದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಆಶ್ರ್ರೀವಚನ ನೀಡಿ ಮಾತನಾಡಿ ಅತ್ಯಂತ ಧಾರ್ಮಿಕ ಶ್ರದ್ಧಾ ಭಕ್ತಿಯ ಸನಾತನ ಧರ್ಮ ನಮ್ಮದು, ಅಂತಹ ಧರ್ಮದ ಉಳಿವಿಗೆ ನಮ್ಮ ಯುವಕರು ಶ್ರಮಿಸಬೇಕಾಗಿದೆ ಈ ಮೂಲಕ ಮುಂದಿನ ತಲೆಮಾರಿಗೆ ಕೊಂಡ್ಯೊಯುವ ಕಾರ್ಯಮಾಡಬೇಕಾಗಿದೆ.
ಧಾರ್ಮಿಕ ಕ್ಷೇತ್ರಗಳು ಉಳಿಯಬೇಕಾದರೆ ಹೆಚ್ಚು ಹೆಚ್ಚು ದೇವಳಗಳ ಸಂದರ್ಶನ ಮಾಡಬೇಕು ಎಂದರಲ್ಲದೆ ಮಹಾಲಿಂಗೇಶ್ವರ ಸನ್ನಿಧಿ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಕಾಣಸಿಗುತ್ತದೆ. ಗ್ರಾಮ ಸುಭಿಕ್ಷೆಯಾಗಬೇಕಾದರೆ ದೇವಳಗಳು ಜೀರ್ಣೋದ್ಧಾರಗೊಂಡು ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ವಹಿಸಿದ್ದರು.
ಈ ಸಂದರ್ಭದಲ್ಲಿ ದೇವಳದಲ್ಲಿ ವಿವಿಧ ರೀತಿಯಲ್ಲಿ ಸೇವೆಗೈದ ಗ್ರಾಮದ ಹಿರಿಯರಾದ ಬಾಬಿ ದೇವಾಡಿಗ,ಕಮಲ ದೇವಾಡಿಗ,ಗಂಗಾ ದೇವಾಡಿಗ,ಕಾವೇರಿ ದೇವಾಡಿಗ ಇವರುಗಳನ್ನು ಸನ್ಮಾನಿಸಲಾಯಿತು.
ದೇವಳದಲ್ಲಿ ರಥ ಸೇವಾ ಕೈಂಕರ್ಯ ನೀಡುತ್ತಿರುವ ನಾರಾಯಣ ಆಚಾರ್ಯ ಇವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ಹಿಂದುಳಿದ ಹಾಗೂ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ,ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ,ಬ್ರಸ್ರೂರು ಮಹಾಲಿಂಗೇಶ್ವರ ದೇವಳದ ಧರ್ಮದರ್ಶಿ ಅಪ್ಪಣ ಹೆಗ್ಡೆ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್,ಭಾರತೀಯ ದೂರಸಂಪರ್ಕ ಕೇಂದ್ರದ ನಿವೃತ್ತ ಅಧಿಕಾರಿ ಎಂ.ವಿ ಮಯ್ಯ,ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್,ಶ್ರೀ ಗುರುನರಸಿಂಹ ಕಲ್ಯಾಣಮಂಟಪ ಬೆಂಗಳೂರು ಇದರ ಕಾರ್ಯದರ್ಶಿ ಕೆ.ಶಶಿಧರ ಮಯ್ಯ,ಪ್ರಥಮ್ ಗ್ರೂಪ್ಸ್ ಮುಖ್ಯಸ್ಥ ಸುರೇಶ್ ಶೆಟ್ಟಿ,ಸಾಯಿ ವಿದ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ಇದರ ಸ್ಥಾಪಕಾಧ್ಯಕ್ಷ ಎಂ.ಆರ್ ಹೊಳ್ಳ,ಉದ್ಯಮಿ ಮಲ್ಯಾಡಿ ಶಿವರಾಮ್ ಶೆಟ್ಟಿ ,ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಧಕೃಷ್ಣ ಉರಾಳ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ತಂತ್ರಗಳಾದ ಗಣೇಶ್ ಅಡಿಗ ,ಗರಿಕೆಮಠದ ವೇ.ಮೂ ರಾಮಪ್ರಸಾದ ಅಡಿಗ,ಕೋಟ ಅಮೃತೇಶ್ವರಿದೇವಳದ ಟ್ರಸ್ಟಿ ಎಂ.ಸುಬ್ರಾಯ ಆಚಾರ್ಯ ,ದೇವಳದ ಟ್ರಸ್ಟಿ ಅಶೋಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಅರುಣಾಚಲ ಮಯ್ಯ ಸ್ವಾಗತಿಸಿದರು.ಶಿಕ್ಷಕಿ ನಾಗರತ್ನ ಹೇರ್ಳೆ ನಿರೂಪಿಸಿದರು.