ಕುಂದಾಪುರ ಮಿರರ್ ಸುದ್ದಿ…
ಕೋಟ : ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಚರ್ ವಾಹನ ಹಾಗೂ ದ್ವಿಚಕ್ರ ವಾಹನ ಮದ್ಯೆ ಅಪಘಾತವಾಗಿ ಓರ್ವ ಮೃತಪಟ್ಟಿದ್ದು ಮೂವರಿಗೆ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಮಂಗಳೂರಿಂದ ಕುಂದಾಪುರ ಹೋಗುವ ಲಾರಿಯು ಕೋಟ ಮಣೂರು ಬೊಬ್ಬರ್ಯ ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯೆ ಟಯರ್ ಪಂಚರ್ ಆಗಿ ನಿಂತಿದ್ದು. ಅದೇ ದಾರಿಯಾಗಿ ಕೋಟದಿಂದ ಕುಂಬಾಸಿ ಹೋಗುತ್ತಿದ್ದ ಮೂವರು ಬೈಕ್ ಸವಾರರು ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಕೆಟ್ಟು ನಿಂತ ಲಾರಿಯನ್ನು ಗಮನಿಸದೆ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿರುತ್ತಾರೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಓರ್ವ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾನೆ. ಮೃತರನ್ನು ಪ್ರಸನ್ನ ದೇವಾಡಿಗ ಎಂದು ಗುರುತಿಸಲಾಗಿದೆ.
ಮತ್ತಿರ್ವ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದು ಇಚರ್ ವಾಹನ ಚಾಲಕ ಗಾಯಗೊಂಡಿದ್ದು ಕೋಟ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಭರತ್ ಗಾಣಿಗ ಅವರು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ