ಮೂಡ್ಲಕಟ್ಟೆ ಎಂ.ಐ.ಟಿ – ಜೆ ಸಿ ಐ ವತಿಯಿಂದ ಅರೋಗ್ಯ ಮಾಹಿತಿ ಕಾರ್ಯಾಗಾರ

0
768

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ಇವರ ಆಶ್ರಯದಲ್ಲಿ ಜೆಸಿಐ ಕುಂದಾಪುರ ಇವರ ಪ್ರಾಯೋಜಕತ್ವದ ವಿಶ್ವ ಅರೋಗ್ಯ ದಿನಾಚರಣೆಯ ಪ್ರಯುಕ್ತ ಪ್ರಯಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರ ಅರೋಗ್ಯ ಮತ್ತು ಸಮಸ್ಯೆಗಳು ಎಂಬ ವಿಷಯದ ಮೇಲೆ ತಜ್ಞ ವೈದ್ಯರಿಂದ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಮನೀಶ್ ಆಸ್ಪತ್ರೆಯ ಸಂಸ್ಥಾಪಕಿ, ಡಾ. ಪ್ರಮೀಳಾ ನಾಯಕ್ ಫೆರ್ನಾಂಡಿಸ್ ಅವರು ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಮಹಿಳೆಯರ ದೇಹಕ್ಕೆ ಮತ್ತು ಮನಸ್ಸಿಗೆ ಸಂಬಂಧವಿರುವ ಸಮಸ್ಯೆಗಳ ಮೇಲೆ ಮಾಹಿತಿ ನೀಡಲಾಯಿತು. ಇದೇ ಸಮಯದಲ್ಲಿ ಆರೋಗ್ಯಕ್ಕೆ ಸಂಬಂದಿಸಿದ ಹಲವು ಪ್ರಶ್ನೆಗಳಿಗೆ ತಜ್ಞ ರಿಂದ ಉತ್ತರ ಪಡೆಯುದರ ಮೂಲಕ ಹಲವು ವಿಷಯಗಳನ್ನ ತಿಳಿದುಕೊಳ್ಳಲಾಯಿತು.

Click Here

Click Here

ಸಭಾ ಕಾರ್ಯಕ್ರಮದಲ್ಲಿ ಜೆಸಿಐ ಕುಂದಾಪುರ ವಲಯದ ಅಧ್ಯಕ್ಷ ಅಭಿಲಾಷ್, ಸಂಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಡಿ, ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಮೆಲ್ವಿನ್ ಡಿ ಸೋಜ, ಡೀನ್ ಪ್ರತಿಭಾ ಎಂ ಪಟೇಲ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜೇನಿಫರ್ ಅವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಶ್ಮಿತ  ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇಂಚರ ವಂದಿಸಿದರು.

Click Here

LEAVE A REPLY

Please enter your comment!
Please enter your name here