ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ದೇವಿ ಮಾರಿಕಾಂಬ ಸೌಹಾರ್ಧ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ ಉದ್ಘಾಟನಾ ಸಮಾರಂಭ ಎ.10ರ ಭಾನುವಾರ 10.30ಕ್ಕೆ ನಡೆಯಲಿದ್ದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ ಶೆಟ್ಟಿ ಭದ್ರತಾ ಕೊಠಡಿ, ಆಡಳಿತ ಕಛೇರಿಯನ್ನು ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕ ಮಂಜುನಾಥ ಎಸ್.ಕೆ. ಆಡಳಿತ ಕಛೇರಿ,ಭದ್ರತಾ ಕೋಶವನ್ನು ಶ್ರೀ ಗುರುನರಸಿಂಹ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಧರ ಸೋಮಯಾಜಿ ಉದ್ಘಾಟಿಸಲಿದ್ದಾರೆ. ಮತ್ತಿತರ ಗಣ್ಯರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ. ಕೃಷ್ಣ ಮಾಸ್ಟರ್ ಕೋಡಿ-ಕನ್ಯಾಣ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.