ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಯಶಸ್ವಿ ಉದ್ಯಮಿಗಳಾಗಿರುವ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಮತ್ತು ಶಶಿ ಹೆಗ್ಡೆ ದಂಪತಿ ಹಾಗೂ ಲೈಫ್‌ಲೈನ್ ಫೀಡ್ಸ್ ಇಂಡಿಯಾ ಪೈ. ಲಿ.ಯ ಅಧ್ಯಕ್ಷರುವಹಾಗೂ ವ್ಯವಸ್ಥಾಪಕ ನಿರ್ದೇಶಕ ಕೈಲ್ಕೆರೆ ಕಿಶೋರ್ ಕುಮಾರ್ ಹೆಗ್ಡೆ ಮತ್ತು ಸುರೇಖಾ ಹೆಗ್ಡೆ ದಂಪತಿಗಳಿಗೆ ಹುಟ್ಟೂರ ಸನ್ಮಾನವು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ರವಿವಾರ ಮೊಳಹಳ್ಳಿಯ ಮಲ್ನಾಡ್ ಟೈಲ್ಸ್ ಆವರಣದಲ್ಲಿ ನಡೆಯಿತು.
ಮೂಡಬಿದಿರೆಯ ಎಜುಕೇಶನ್ ಆಳ್ವಾಸ್ ಫೌಂಡೇಶನ್‌ನ ಪ್ರವರ್ತಕ ಡಾ. ಎಂ. ಮೋಹನ ಆಳ್ವ ಸನ್ಮಾನಿತರನ್ನು ಗೌರವಿಸಿದರು.
ಅವರು ಮಾತನಾಡಿ ಸಾಧನೆ ಮಾಡಿದ ಸಾಧಕರಲ್ಲಿ ಎರಡು ಬಗೆಯ ಸಾಧಕರು ಇದ್ದಾರೆ. ಅವರಲ್ಲಿ ಮೊದಲನೇ ವರ್ಗ ಇತಿಹಾಸ ಫಲದಿಂದ ಸಾಧನೆ ಮಾಡಿಕೊಂಡು ಬಂದವರು.
ಎರಡನೇ ವರ್ಗದವರು ಶೂನ್ಯದಿಂದ ಹೊರಟು ಸಾಧನೆಯ ಗೌರಿಶಂಕರ ಶಿಖರವನ್ನು ಏರಿದವರು.
ಇಂದು ನಾವು ಮಾಡಿದ ಸನ್ಮಾನಿತರು ಈ ಎರಡನೇ ವರ್ಗಕ್ಕೆ ಸೇರಿದವರು ಎಂದರು.
ಪ್ರಪಂಚದಲ್ಲಿ ಇಂದು ಇಂತಹ ಸಾಧಕರೇ ಜಾಸ್ತಿ ಇರುವುದನ್ನು ನಾವು ಕಾಣಬಹುದು. 1960ನೇ ಇಸವಿಯಲ್ಲಿ ಬೆರಳೆಣಿಕೆಯ ಸಾಧಕರು ಇರುತ್ತಿದ್ದರು.
ಇವತ್ತಿನ ದಿನಗಳಲ್ಲಿ ಎಲ್ಲಾ ಸಮುದಾಯದಲ್ಲೂ ಸಾಧಕರು ಇದ್ದಾರೆ. ಈ ಸಾಧಕರನ್ನು ಹುಟ್ಟೂರಿನಲ್ಲಿ ಗುರುತಿಸಿ ಗೌರವಿಸುವುದರಿಂದ ಯುವ ಸಮುದಾಯಕ್ಕೆ ಪ್ರೇರಣೆಯಾಗುತ್ತದೆ. ಯೋಚನೆಗಳು ಯೋಜನೆಗಳಾಗಿ ರೂಪುಗೊಂಡಾಗ ಸಮಾಜಕ್ಕೆ ಉತ್ತಮ ಸಂದೇಶ ಹೋಗುತ್ತದೆ ಎಂದು ಡಾ. ಎಂ. ಮೋಹನ ಆಳ್ವ ಹೇಳಿದರು.
ಕುಮಾರಿ ಕನ್ನಿಕಾ ಅವರಿಂದ ಸ್ವಾಗತ ನೃತ್ಯ ನಡೆಯಿತು.
ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನ ಭಾಷಣಗೈದರು.
ವೇದಿಕೆಯಲ್ಲಿ ಎಂ.ಎಂ. ಚಾರಿಟೆಬಲ್ ಫೌಂಡೇಶನ್ ಮೊಳಹಳ್ಳಿಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಯು. ಶೆಟ್ಟಿ, ಸನ್ಮಾನ ಸಮಿತಿಯ ಗೌರವಾಧ್ಯಕ್ಷ ಹೆಚ್. ಜಯಶೀಲ ಶೆಟ್ಟಿ, ಅಧ್ಯಕ್ಷ ಎಂ. ದಿನೇಶ್ ಹೆಗ್ಡೆ ಕೋಶಾಧಿಕಾರಿ ಕಿಶೋರ್ ಶೆಟ್ಟಿ, ಕಾರ್ಯದರ್ಶಿ ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಸುಣ್ಣಾರಿ ಎಕ್ಸಲೆಂಟ್ ಕಾಲೇಜ್ ನ ವಿದ್ಯಾರ್ಥಿನಿಗಳಿಂದ ಪ್ರಾಥನೆ ನಡೆಯಿತು.
ಗಾಯಕ ಅಶೋಕ್ ಸಾರಂಗ ಮತ್ತು ಬಳಗದವರಿಂದ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು.
ಸನ್ಮಾನ ಸಮಿತಿಯ ಅಧ್ಯಕ್ಷ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಸ್ವಾಗತಿಸಿದರು.
ಕಾರ್ಯದರ್ಶಿ ಶಾಂತಾರಾಮ ಶೆಟ್ಟಿ ವಂದಿಸಿದರು.
ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆ ಬಡಾಮನೆ ಪ್ರಸ್ತಾವನೆಗೈದರು. ಅಕ್ಷಯ ಹೆಗ್ಡೆ ಮೊಳಹಳ್ಳಿ, ರಾಜಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.