ಕೋಟ ಗಾಣಿಗ ಯುವ ಸಂಘಟನೆ ದಶಮಾನೋತ್ಸವ ಸಂಭ್ರಮ :ಗಮನ ಸೆಳೆದ ಆಹಾರಮೇಳ

0
492

ಜಿಲ್ಲಾಧ್ಯಕ್ಷ ವಾಸುದೇವ ಬೈಕಾಡಿರಿಂದ ಚಾಲನೆ

ಕುಂದಾಪುರ ಮಿರರ್ ಸುದ್ದಿ…
ಕೋಟ: ಬಡವರ ಕಷ್ಟಕ್ಕೆ ಸ್ಪಂದಿಸುವ ಮನೋಭಾವನೆ ಎಲ್ಲಾವುದಕ್ಕಿಂತ ಶ್ರೇಷ್ಠವಾದದ್ದು ಈ ದಿಸೆಯಲ್ಲಿ ಗಾಣಿಗ ಯುವ ಸಂಘಟನೆ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಸೋಮ ಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ ಹೇಳಿದರು.

ಸಾಸ್ತಾನದ ಮಾಬುಕಳದ ಚೇತನಾ ಪ್ರೌಢಶಾಲೆಯ ಚೆಲ್ಲಮಕ್ಕಿ ದಿ.ಗೋಪಾಲ ಗಾಣಿಗ ವೇದಿಕೆಯಲ್ಲಿ ಭಾನುವಾರ ಗಾಣಿಗ ಯುವ ಸಂಘಟನೆ ಕೋಟ ಘಟಕದ ದಶಮಾನೋತ್ಸವ ಹತ್ತು ಹೆಜ್ಜೆ ಶೀರ್ಷಿಕೆಯಡಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಸಮಾಜದಲ್ಲಿ ಒಗ್ಗಟ್ಟು ಅತ್ಯಗತ್ಯ ಈ ನಿಟ್ಟಿನಲ್ಲಿ ಸಂಘಟನೆಗಳು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿ ಅದರ ಏಳಿಗೆಗೆ ಶ್ರಮಿಸಲು ಸಲಹೆ ನೀಡಿದರು.

ಕೋಟ ಘಟಕದ ಅಧ್ಯಕ್ಷ ವಿಶ್ವನಾಥ ಗಾಣಿಗ ಅಧ್ಯಕ್ಷತೆ ವಹಿಸಿದ್ದರು.

Click Here

ಸನ್ಮಾನ/ಪ್ರತಿಭಾ ಪುರಸ್ಕಾರ
ಇದೇ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಯಕ್ಷಗಾನದ ಹಿರಿಯ ಕಲಾವಿದ ಅಜ್ರಿ ಗೋಪಾಲ ಗಾಣಿಗ, ಟೈಲರ್ ಅಣ್ಣಪ್ಪ ಗಾಣಿಗ ಚಿತ್ರಪಾಡಿ, ಸಮಾಜ ಸೇವಕಿ ನಾಗವೇಣಿ ಪಂಡರಿನಾಥ ಬಿರ್ತಿ, ಡಾ.ನವೀನ್, ಭಾಸ್ಕರ ಗಾಣಿಗ ಅಚ್ಲಾಡಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ ಮಾಲ್ತಾರು, ಸಂಪರ್ಕಸುಧಾ ಮಾಸ ಪತ್ರಿಕೆಯ ಸಂಪಾದಕ ರಘುರಾಮ ಬೈಕಾಡಿ, ಗಣೇಶ್ ಜಿ ಚೆಲ್ಲಮಕ್ಕಿಯವರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ಪ್ರಗತಿಪರ ಕೃಷಿಕ ಬಾಬು ಗಾಣಿಗ ಕಾರ್ಕಡ, ಯುವ ನಿರೂಪಕ ಪ್ರನುತ್ ಆರ್ ಗಾಣಿಗ, ರಂಗನಟಿ ಶ್ರೇಯಾ ಶ್ರೀಕಾಂತ್, ಮಾಜಿ ಸೈನಿಕ ಆನಂದ ಗಾಣಿಗ ಚಿತ್ರಪಾಡಿ ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರ ತಾಲ್ಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ ಕುಂಭಾಶಿ, ಮುಂಬಯಿ ಗಾಣಿಗ ಸಮಾಜದ ಅಧ್ಯಕ್ಷ ಬಿ.ವಿ.ರಾವ್, ಬಾರ್ಕೂರು ಅನ್ನಪೂರ್ಣೇಶ್ವರಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಜಯಂತಿ ವಾಸುದೇವ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯೆ ರತ್ನಾ ನಾಗರಾಜ ಗಾಣಿಗ, ಕೋಟಗಾಣಿಗ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಶ್ರೀಧರ್, ಸಂಪರ್ಕಸುಧಾ ಮಾಸ ಪತ್ರಿಕೆಯ ಅಧ್ಯಕ್ಷ ಎಸ್.ಕೆ.ಪ್ರಾಣೇಶ್, ಗಾಣಿಗ ಸಮಾಜದ ಉಪಾಧ್ಯಕ್ಷ ಉದಯ ಕೆ, ಶಿಕ್ಷಕ ಚಂದ್ರಶೇಖರ ಬೀಜಾಡಿ, ರಾಜ್ಯ ಮಾನವ ಹಕ್ಕುಗಳ ಸಮಿತಿಯ ಕಾರ್ಯದರ್ಶಿ ದಿನೇಶ್ ಗಾಣಿಗ, ಗುತ್ತಿಗೆದಾರ ಶೇವಧಿ ಸುರೇಶ್ ಗಾಣಿಗ,ಕಾರ್ಯದರ್ಶಿ ಗಣೇಶ್ ಗಾಣಿಗ, ಕೋಶಾಧಿಕಾರಿ ಗಿರೀಶ್ ಗಾಣಿಗ, ಗೌರವಾಧ್ಯಕ್ಷ ಪ್ರಶಾಂತ್ ಕಾರ್ಕಡ ಇದ್ದಉಪಸ್ಥಿತರಿದ್ದರು.

ಗಣೇಶ್ ಜಿ ಚಲ್ಲೆಮಕ್ಕಿ ಸ್ವಾಗತಿಸಿದರು. ನಾಗರಾಜ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಅಚ್ಲಾಡಿ ದಶಮಾನೋತ್ಸವದ ವರದಿ ವಾಚಿಸಿದರು. ಸಂಘಟನೆಯ ಕಾರ್ಯದರ್ಶಿ ಗಣೇಶ್ ಗಾಣಿಗ ವಂದಿಸಿದರು. ಪ್ರನುತ್ ಆರ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಸಂಘಟನೆಯ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಸಮುದಾಯದಅಶಕ್ತ ,ಅನಾರೋಗ್ಯಕ್ಕಿಡಾದವರಿಗೆ ಸಹಾಯಹಸ್ತ ನೀಡಲಾಯಿತು

ಗಮನ ಸೆಳೆದ ಉಚಿತ ಆಹಾರಮೇಳ
ದಶಮಾನೋತ್ಸವ ಅಂಗವಾಗಿ ಉಚಿತ ಆಹಾರ ಮೇಳ ವಿಶೇಷವಾಗಿ ಗಮನ ಸೆಳೆಯಿತು.ಸುಮಾರು 30ಕ್ಕೂ ಅಧಿಕ ಆಹಾರ ವಿವಿಧ ಖಾದ್ಯಗಳು,ತಂಪು ಪಾನೀಯಗಳು ಸಮುದಾಯ ಹಾಗೂ ನೆರೆದಿದ ಸ್ಥಳೀಯರನ್ನು ಆಕರ್ಷಿಸಿತು.
ಸಾಂಸ್ಕ್ರತಿಕ ಕಾರ್ಯಕ್ರಮದ ಭಾಗವಾಗಿ ಸಮಾಜದ ಯುವ ಪ್ರತಿಭೆಗಳಿಂದ ಗಾನ,ನೃತ್ಯ,ವೈಭವ ನಡೆಯಿತು.

LEAVE A REPLY

Please enter your comment!
Please enter your name here