ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಮಹಾತೋಭಾರ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ರಾಜೇಂದ್ರ ಅಡಿಗರ ನೇತೃತ್ವದಲ್ಲಿ ವಿಶೇಷ ರಾಮನವಮಿ ಪೂಜೆ ನಡೆಯಿತು.
ಶೈಲಜಾ ಸದಾಶಿವ ಅಡಿಗೆ ಹಾಗೂ ತಂಡದವರಿಂದ ಭಜನೆ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಣೇಶ ಭಟ್ಟರು, ಪ್ರಧಾನ ಅರ್ಚಕರಾದ ಶಂಕರನಾರಾಯಣ ಅಡಿಗ, ಸ್ಥಳೀಯರಾದ ರಾಜು ದೇವಾಡಿಗ, ವರದರಾಜ ಭಟ್, ಶಂಕರ ತುಂಗ ಉಪಸ್ಥಿತರಿದ್ದರು.