ಅಭಿವೃದ್ಧಿ ಪಥದತ್ತ ಸಹಕಾರಿ ಕ್ಷೇತ್ರ ಮುನ್ನುಗ್ಗುತ್ತಿದೆ – ಸಚಿವ ಕೋಟ ಶ್ರೀನಿವಾಸ ಪೂಜಾರಿ

0
512

ಕುಂದಾಪುರ ಮಿರರ್ ಸುದ್ದಿ…

ಕೋಟ: ಸಮಾಜದ ಅಭಿವೃದ್ಧಿಯ ಜೊತೆಗೆ ಸಹಕಾರಿ ರಂಗ ಉನ್ನತಿ ಸಾಧಿಸುತ್ತಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೋಡಿ ಕನ್ಯಾಣದಲ್ಲಿ ನೂತನವಾಗಿ ಕಾರ್ಯಾರಂಭಗೊಂಡ ಶ್ರೀದೇವಿ ಮಾರಿಕಾಂಬಾ ಸೌಹಾರ್ಧ ಸಹಕಾರಿ ಸಂಘ ಇದನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ರಂಗ ಜನಸಾಮಾನ್ಯರ ವಿಶ್ವಾಸ ಗಳಿಸುವುದರ ಜೊತೆಗೆ ಸಾಮಾಜಿಕವಾಗಿ ತನ್ನನ್ನು ತಾನು ತೋಡಗಿಸಿಕೊಳ್ಳುತ್ತಿದೆ ಇದು ಪ್ರಶಂಸನೀಯ ಕಾರ್ಯ.ಪ್ರಸ್ತುತ ಕಾಲಘಟ್ಟದಲ್ಲಿ ಬಹು ಎತ್ತರಕ್ಕೆ ಬೆಳೆಯುತ್ತಿರುವ ಸಹಕಾರಿ ಕ್ಷೇತ್ರ ಜನರನಾಡಿ ಮಿಡಿತ ಅರಿತು ಕಾರ್ಯನಿರ್ವಹಿಸುತ್ತಿದೆ.ಜನಸಾಮಾನ್ಯರ ಅಭ್ಯುದಯಕ್ಕೆ ಮುನ್ನುಡಿ ಬರೆಯುತ್ತಿರುವ ಸಹಕಾರಿ ಸಂಘಗಳು, ರೈತ ಹಾಗೂ ಉದ್ಯಮಿ ಸ್ನೇಹಿಯಾಗಿ ರೂಪುಗೊಂಡಿದೆ.ಅದೇ ರೀತಿ ಮಾರಿಕಾಂಬಾ ಸಹಕಾರಿ ಸಂಘ ಆದರ್ಶ ಸಂಘವಾಗಿ ರಾಜ್ಯಕ್ಕೆ ಮಾದರಿಯಾಗಿ ಬೆಳೆಯಲಿ ಎಂದು ಆಶಿಸಿದರು.

Click Here

ಅಧ್ಯಕ್ಷತೆಯನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸೌಹಾರ್ಧ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್ ಇವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಂಘಗಳ ನಿರ್ದೇಶಕ ಮಂಜುನಾಥ್ ಎಸ್ ಕೆ ಆಡಳಿತ ಕಚೇರಿಯನ್ನು ಉದ್ಘಾಟಿಸಿದರು.

ಶ್ರೀ ಗುರುನರಸಿಂಹ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಸ್ವಾಮೀಜಿ ಭದ್ರತಾ ಕೋಶವನ್ನು,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ ಕುಂದರ್ ಗಣಕಯಂತ್ರವನ್ನುಉದ್ಘಾಟಿಸಿದರು, ಕೋಡಿ ಗ್ರಾಮ ಪಂಚಾಯತ ಅಧ್ಯಕ್ಷ ಕೆ ಪ್ರಭಾಕರ್ ಮೆಂಡನ್ ಶೇರು ಪತ್ರವನ್ನು. ಠೇವಣಿ ಪತ್ರವನ್ನು ಶ್ರೀದೇವಿ ಮಾರಿಕಾಂಬಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಮಾಸ್ತರ್, ಸಂಘದ ಉಪಾಧ್ಯಕ್ಷ ಅರುಣ್ ಜಿ ಕುಂದರ್ ಹಸ್ತಾಂತರಿಸಿದರು. ಶ್ರೀ ದೇವಿ ಮಾರಿಕಾಂಬಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಮಾಸ್ತರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮವನ್ನು ನ್ಯಾಯವಾದಿ ಹರ್ಷರಾಜ್ ಕೋಡಿ ಕನ್ಯಾಣ ನಿರ್ವಹಿಸಿದರೆ,ಮುಖ್ಯ ಕಾಯ್ನಿರ್ವಹಣಾಧಿಕಾರಿ ಪವನ್ ವಂದಿಸಿದರು.ಶಂಕರ್ ಬಂಗೇರ ಸಹಕರಿಸಿದರು.

Click Here

LEAVE A REPLY

Please enter your comment!
Please enter your name here