ಯಕ್ಷಗಾನದಲ್ಲೆ ಬದುಕು ರೂಪಿಸಿಕೊಂಡ ಅದೆಷ್ಟೊ ಕಲಾವಿದರು ಯಕ್ಷಕಲೆಯನ್ನು ಉಳಿಸಲು ಶ್ರಮಿಸುತ್ತಿದ್ದಾರೆ- ಐರೋಡಿ ರಾಜಶೇಖರ ಹೆಬ್ಬಾರ್

0
445

ಕುಂದಾಪುರ ಮಿರರ್ ಸುದ್ದಿ…

ಕೋಟ: ಕಲಾ ಕ್ಷೇತ್ರದಲ್ಲಿ ಯಕ್ಷಗಾನ ಕ್ಷೇತ್ರ ಸಾಕಷ್ಟು ಶಿಷ್ಯವರ್ಗವನ್ನು ಹುಟ್ಟಿಹಾಕಿದೆ ಅದರಲ್ಲೆ ಬದುಕನ್ನು ರೂಪಿಸಿಕೊಂಡ ಕಲಾವಿದರು ಯಕ್ಷಕಲೆಯನ್ನು ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ ಇದು ಪ್ರಶಂಸನೀಯ ಕಾರ್ಯ ಎಂದು ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಹೇಳಿದರು.

ಸಾಲಿಗ್ರಾಮದ ಪಾರಂಪಳ್ಳಿಯ ಪ್ರಸಿದ್ಧ ಮದ್ದಲೆವಾದಕ ರಾಘವೇಂದ್ರ ಹೆಗಡೆ ಯಲ್ಲಾಪುರ ಇವರ ನಾದಾಮೃತ ಕಲಾದೀವಿಗೆ ಆಯೋಜನೆಯ ಗುರು ನಗರ ದಿ. ಸುಬ್ರಹ್ಮಣ್ಯ ಆಚಾರ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿ ಒರ್ವ ಕಲಾವಿದ ಇನ್ನೊರ್ವ ಕಲಾವಿದನ್ನು ಹುಟ್ಟುಹಾಕಬೇಕೆ ವಿನಹ ಅವನಲ್ಲಿಯೇ ಕಲೆ ಉಳಿದುಕೊಂಡರೆ ಕಲೆ ಜಗತ್ತು ಕಾಣಲು ಸಾಧ್ಯವಿಲ್ಲ ಆದ್ದರಿಂದ ಕಲಾ ಕೇಂದ್ರಗಳ ಮೂಲಕ ಕಲೆಯನ್ನು ಧಾರೆ ಎರೆಯುವ ಮನಸ್ಥಿತಿ ಸೃಷ್ಠಿಸಿಕೊಳ್ಳಿರಿ ಎಂದು ಕಲಾವಿದರಿಗೆ ಕಿವಿಮಾತು ಹೇಳಿದರಲ್ಲದೆ ,ಯಕ್ಷಗಾನ ಕ್ಷೇತ್ರಕ್ಕೆ ಕೆ.ಪಿ ಹೆಗಡೆಯಂತ ಪ್ರಾಚಾರ್ಯರ ಕೊಡುಗೆ ಅನನ್ಯವಾಗಿದೆ.ಇಂಥಹ ಮಹಾನ್ ಕಲಾವಿದರನ್ನು ಗೌರವಿಸುವ ಮನೋಭಾವನೆ ಶ್ರೇಷ್ಠೆತೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ವಹಿಸಿ ಶುಭಹಾರೈಸಿದರು.

Click Here

Click Here

ಈ ಸಂದರ್ಭದಲ್ಲಿ ಭಾಗವತ ಪ್ರಾಚಾರ್ಯ ಕೆ.ಪಿ ಹೆಗಡೆ ದಂಪತಿಗಳನ್ನು ನಗರ ಸುಬ್ರಹ್ಮಣ್ಯ ಆಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಉತ್ತರಕನ್ನಡ ಜಿಲ್ಲೆಯ ಸಂಪಕಂಡ ಗಜಾನನ ಶಾಲೆಗೆ ದೇಣಿಗೆಯನ್ನು ಶಾಲಾ ಮುಖ್ಯ ಶಿಕ್ಷಕ ಜಿ.ಎನ್ ಹೆಗಡೆ ಇವರಿಗೆ ರಾಘವೇಂದ್ರ ಹೆಗಡೆ ಹಸ್ತಾಂತರಿಸಿದರು.

ಮುಖ್ಯ ಅಭ್ಯಾಗತರಾಗಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷ ಜಿ.ರಾಮಚಂದ್ರ ಐತಾಳ್ ,ಸಂಪಕಂಡ ಪ್ರೌಢಶಾಲಾ ಮುಖ್ಯ ಶಿಕ್ಷಕ ಎಂ.ಜಿ ಭಟ್,ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಚಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಭಾಗವತ ಲಂಭೋಧರ ಹೆಗಡೆ ಸ್ವಾಗತಿಸಿದರೆ,ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್ ಸುಜಯೀಂದ್ರ ಹಂದೆ ನಿರೂಪಿಸಿದರು.ನಮನ ರಾಮಘವೇಂದ್ರ ಹೆಗಡೆ ವಂದಿಸಿದರು.

ಎಚ್ ಸುಜಯೀಂದ್ರ ಹಂದೆ ನಿರ್ದೇಶನದಲ್ಲಿ ಭಾಗವತರಾದ ಹೆರಂಜಾಲ ಗೋಪಾಲ ಗಾಣಿ,ರಾಘವೇಂದ್ರ ಮಯ್ಯ ಹಾಲಾಡಿ,ಲಂಭೋಧರ ಹೆಗಡೆ,ಉದಯ ಕುಮಾರ್ ಹೊಸಾಳ ಇವರ ಗಾನ ವೈಭವ ನಡೆಯಿತು.ಯಕ್ಷದೇಗುಲದ ಸುದರ್ಶನ ಉರಾಳ,ರಂಗಸಂಪದದ ರಾಘವೇಂದ್ರ ತುಂಗ ಸಹಕರಿಸಿದರು.

Click Here

LEAVE A REPLY

Please enter your comment!
Please enter your name here