ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ರಿ., ಉಪ್ಪುಂದ ಇದರ ಉದ್ಘಾಟನಾ ಕಾರ್ಯಕ್ರಮ ಎ.14ರಂದು ಕಟ್‍ಬೇಲ್ತೂರು ರಾಮ ಲಕ್ಷ್ಮಣ ಸಭಾಭವನದಲ್ಲಿ ನಡೆಯಿತು.
ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಚಾರಿಟೇಬಲ್ ಅಧ್ಯಕ್ಷರಾದ ಎಚ್.ಸುಬ್ಬಯ್ಯ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳೆಲ್ಲರೂ ದೀಪ ಬೆಳಗಿಸಿ ಟ್ರಸ್ಟ್ ಉದ್ಘಾಟಿಸಲಾಯಿತು.
ನಿವೃತ್ತ ಕೆ.ಎ.ಎಸ್.ಅಧಿಕಾರಿ ಆರ್.ನಾಗರಾಜ ಶೆಟ್ಟಿ, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಜಿ.ಕೆ ಬಸವರಾಜ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ರಿ., ಬಾರಕೂರು ಇದರ ಅಧ್ಯಕ್ಷ ವಾಸುದೇವ ಬೈಕಾಡಿ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಕುಂಭಾಶಿ, ಉತ್ತರ ಕನ್ನಡ ಗಾಣಿಗ ಸಂಘ ಕುಮಟಾ ಇದರ ಅಧ್ಯಕ್ಷ ದಾಮೋದರ ಕೆ.ಶೆಟ್ಟಿ, ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ನಾಗರಾಜ, ವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಫ್ ಸೊಸೈಟಿ ಬೆಂಗಳೂರು ಅಧ್ಯಕ್ಷ ಎಮ್.ವೇಣುಗೋಪಾಲಕೃಷ್ಣ, ಸಂಪರ್ಕಸುಧಾ ಪತ್ರಿಕೆ ಸಂಪಾದಕ ರಘುರಾಮ ಬೈಕಾಡಿ, ಚೇತನ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿನ ಮುಖ್ಯೋಪಾಧ್ಯಾಯರಾದ ಗಣೇಶ ಚೆಲ್ಲಿಮಕ್ಕಿ, ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಣೇಶ ಗಾಣಿಗ, ಬೆಂಗಳೂರು ಉದ್ಯಮಿ ಸೂರ್ಯನಾರಾಯಣ ಜಡ್ಡಿನಹಿತ್ಲು, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಮಾಲ್ತಾರು, ಸುರೇಶ ಶೆಟ್ಟಿ ಜೀವನ ಸುಪಾರಿ, ಬಾಸ್ಕೇರಿ ಹೊನ್ನಾವರ, ಎಚ್.ಟಿ ಮಂಜುನಾಥ, ಸಾಧನಾ ಅಕಾಡೆಮಿಯ ಮಂಜುನಾಥ, ಸ್ಮಿತಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಾದ ಬೆಂಗಳೂರು ಜಯದೇವ ಆಸ್ಪತ್ರೆಯ ಹೃದಯ ತಜ್ಞರಾದ ಡಾ.ಎಸ್.ಎಮ್.ಜೈಕುಮಾರ, ಕುಮಟಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ನಾಗಭೂಷಣ ಕಲ್ಮನೆ, ಯಕ್ಷಸಿರಿ ಪ್ರಶಸ್ತಿ ಪುರಸ್ಕøತ ಆಜ್ರಿ ಗೋಪಾಲ ಗಾಣಿಗ, ರಾಜ್ಯ ಮಾನವ ಹಕ್ಕು ಆಯೋಗದ ಕಾರ್ಯದರ್ಶಿ ದಿನೇಶ ಗಾಣಿಗ ಕೋಟಾ, ಹಿರಿಯ ವಕೀಲರು ಪತ್ರಕರ್ತರಾದ ಎಮ್.ರಾಘವೇಂದ್ರ ಸಾಗರ, ಎಮ್.ಐ.ಟಿ ಮಣಿಪಾಲ ಉಪನ್ಯಾಸಕಿ ಡಾ|ಪೂರ್ಣಿಮಾ ಪಾಂಡುರಂಗ ಕುಂದಾಪುರ, ನಿವೃತ್ತ ಇಂಜಿನಿಯರ್, ವಿ.ಐ.ಎಸ್.ಎಲ್ ಭದ್ರಾವತಿ ಇದರ ಕುಸುಮಾಕರ, ಮುಂಬಯಿಯಲ್ಲಿ ಮಕ್ಕಳ ತಜ್ಞೆ ಆಗಿರುವ ಡಾ.ರಕ್ಷಾ ರತ್ನಾಕರ ಗಾಣಿಗ, ಅಂತರಾಷ್ಟ್ರೀಯ ವೈಟ್‍ಲಿಫ್ಟರ್ ವಿಶ್ವನಾಥ ಬಾಳಿಕೆರೆ, ಡಾ.ಸರಸ್ವತಿ ಬೈಂದೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಶ್ರೀಧರ ಗಾಣಿಗ, ಜಿಲ್ಲಾ ಪ್ರಶಸ್ತಿ ಪುರಸ್ಕøತ ಶಿಕ್ಷಣ ಇಲಾಖೆಯ ಶೇಖರ ಗಾಣಿಗ ಬೀಜಮಕ್ಕಿ, ಚಿತ್ರಕಲಾ ಶಿಕ್ಷಕ ಗಿರೀಶ ಗಾಣಿಗ ತಗ್ಗರ್ಸೆ ಇವರುಗಳನ್ನು ಸನ್ಮಾನಿಸಲಾಯಿತು.
ಪುಸ್ತಕ ಬಿಡುಗಡೆ:
ಜನಪ್ರತಿನಿಧಿ ಪ್ರಕಾಶನ ಹೊರ ತಂದಿರುವ ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಎಚ್.ಸುಬ್ಬಯ್ಯ ಗಾಣಿಗ ಶಿವಮೊಗ್ಗ ಇವರ ದ್ವಿತೀಯ ಪ್ರವಾಸ ಕಥನ ಉತ್ತರದ ಸನ್ನಿಧಿಯಲ್ಲಿ ಪುಸ್ತಕವನ್ನು ಕನ್ನಡಪ್ರಭ ಪತ್ರಿಕೆಯ ನಿವೃತ್ತ ಹಿರಿಯ ಸುದ್ಧಿ ಸಂಪಾದಕ ಡಾ| ವಾಸುದೇವ ಎಮ್.ಶೆಟ್ಟಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಪ್ರವಾಸ ಕಥನ ಸಾಹಿತ್ಯದಲ್ಲಿ ಲೇಖಕ ತಾನು ನೋಡಿದ, ಅನುಭವಿಸಿದ ಅನುಭವವನ್ನು ಓದುಗರ ಮುಂದೆ ತೆರೆದಿಡಲು ಸಾಧ್ಯವಿದೆ. ಸುಬ್ಬಯ್ಯನವರ ಮೊದಲ ಕೃತಿ ಕೈಲಾಸದ ಸನ್ನಿಧಿ ಕೂಡಾ ಮೌಲಿಕ ಕೃತಿಯಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾರ್ಹತೆ ಮುಖ್ಯವಲ್ಲ, ಸೃಜನಾತ್ಮಕವಾಗಿ ಓದುಗರ ಮುಂದೆ ವಿಷಯ ಬಿತ್ತರಿಸುವುದು ಮುಖ್ಯ. ಆ ಹಿನ್ನೆಲೆಯಲ್ಲಿ ಉತ್ತರದ ಸನ್ನಿಧಿ ಕೂಡಾ ಬಹುಬೇಗ ಓದುಗರನ್ನು ಸೆಳೆಯಲಿದೆ ಎಂದರು.
ಕೃತಿ ಪರಿಚಯ ಮಾಡಿದ ಜನಪ್ರತಿನಿಧಿ ಪ್ರಕಾಶನದ ಮುಖ್ಯಸ್ಥರು, ಜನಪ್ರತಿನಿಧಿ ಪತ್ರಿಕೆ ಸಂಪಾದಕರಾದ ಸುಬ್ರಹ್ಮಣ್ಯ ಪಡುಕೋಣೆ ಅವರು, ಹೆಚ್.ಸುಬ್ಬಯ್ಯನವರು ಕೃಷಿ, ಹೋಟೆಲ್ ಉದ್ಯಮದ ಜೊತೆಯಲ್ಲಿ ದೇಶ ಪರ್ಯಟನೆಯ ಆಸಕ್ತಿ ಬೆಳಸಿಕೊಂಡವರು. ಕೈಲಾಸ ಮಾನಸ ಸರೋವರ ಯಾತ್ರೆಯನ್ನು ವಿಮಾನ ವ್ಯವಸ್ಥೆಗೂ ಮೊದಲೇ ಕಾಲ್ನಡಿಗೆಯಲ್ಲಿ ಕಠಿಣವಾದ ಯಾತ್ರೆಯನ್ನು ಮೂರು ಬಾರಿ ಮಾಡಿದವರು. ಅದರ ಅನುಭವವನ್ನು ಕೈಲಾಸದ ಸನ್ನಿಧಿ ಎನ್ನುವ ಪುಸ್ತಕದ ರಚಿಸುವ ಮೂಲಕ ಹಂಚಿಕೊಂಡಿದ್ದಾರೆ. ಇದೀಗ ತನ್ನ ಉತ್ತರ ಭಾರತದ ಪ್ರಮುಖ ಯಾತ್ರಾಸ್ಥಳಗಳ ಭೇಟಿಯ ಅನುಭವವನ್ನು ಉತ್ತರದ ಸನ್ನಿಧಿಯಲ್ಲಿ ಎನ್ನುವ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ ಎಂದರು.
ನಂತರ ಯು.ಪಿ.ಎಸ್.ಸಿ, ಕೆಪಿಎಸ್‍ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವುದು ಹೇಗೆ ಇನ್ನುವ ಕುರಿತು ಸಾಧನಾ ಅಕಾಡೆಮಿ, ಯುಟ್ಯೂಬ್ ಚಾನೆಲ್ ಶಿಕಾರಿಪುರ ಇದರ ಮಂಜುನಾಥ ಬಿ ಉಪನ್ಯಾಸ ನೀಡಿದರು.
ಟ್ರಸ್ಟಿ ಸುಭಾಷ್ ಮಹಾಬಲೇಶ್ವರ ಶೆಟ್ಟಿ ಸ್ವಾಗತಿಸಿದರು. ಖಜಾಂಚಿ ಯು. ಅನಂತ ಗಾಣಿಗ ವಂದಿಸಿದರು. ಟ್ರಸ್ಟಿ ಕೆ.ಎಮ್.ಶೇಖರ ಕಾರ್ಯಕ್ರಮ ನಿರ್ವಹಿಸಿದರು.