ಕುಂದಾಪುರ ಮಿರರ್ ಸುದ್ದಿ…
ಕೋಟ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಎಂ. ಕಾಂ.ನಲ್ಲಿ ತೃತೀಯ ರಾಂಕ್ ಪಡೆದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪುತ್ರಿ ಕಾಲೇಜಿಗೆ ಕೀರ್ತಿ ತಂದ ಸ್ವಾತಿ ಪೂಜಾರಿ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ವಿದ್ಯಾರ್ಥಿಯ ಮನೆಗೆ ತೆರಳಿ ಸನ್ಮಾನಿಸಲಾಯಿತು.
ಸನ್ಮಾನಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸಂಟ್ ಆಳ್ವ ಮಾತನಾಡಿ, ತಂದೆ ತಾಯಿಯ ಸರಳ ಸಜ್ಜನಿಕೆ ಆಚಾರ-ವಿಚಾರಗಳಿಂದ ಪ್ರಭಾವಿತರಾಗಿ, ಯಾವತ್ತು ಸಚಿವರ ಪುತ್ರಿ ಎಂದು ಹೇಳಿಕೊಳ್ಳದೆ ಕಾಲೇಜಿಗೆ ದೊಡ್ಡ ಕೀರ್ತಿ ತಂದು ಕೊಟ್ಟು ನಮ್ಮ ಎಲ್ಲಾ ವಿಧ್ಯಾರ್ಥಿಗಳಿಗೆ ಮಾದರಿ ಯಾಗಿದ್ದಲ್ಲದೆ, ಇನ್ನೂ ಉನ್ನತ ಮಟ್ಟದ ಸಾಧನೆ ನಿಮ್ಮಿಂದಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ, ಮಾತನಾಡಿದ ಸ್ವಾತಿ ನನ್ನ ಯಶಸ್ವಿಗೆ ಕಾರಣೀಕರ್ತರಾದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ನನ್ನ ಎಲ್ಲಾ ಮಿತ್ರರಿಗೂ ವಂದನೆಗಳನ್ನು ಸಲ್ಲಿಸಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಸಿ. ಜಯರಾಮ್ ಶೆಟ್ಟಿಗಾರ ಕಾಯ9ಕೃಮವನ್ನು ಸಂಯೋಜಿಸಿದ್ದರು. ಪ್ರೋ. ಸೋಫಿಯಾ ಡಯಾಸ್. ಮಹಿಳಾ ಪ್ರಕೋಷ್ಠದ ಸಂಚಾಲಕಿ ಪ್ರೋ. ರೇಶ್ಮಾ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೋ. ರವಿನಂದನ್, ಶಾಂತಾ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.