Pics By Krishna Gangolli
ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಧರ್ಮದ, ಹಿಂದುತ್ವದ ಆಧಾರದ ಮೇಲೆ ಗೆದ್ದು ಆಡಳಿತ ನಡೆಸುತ್ತಿರುವ ಸರಕಾರ ಸೆಕ್ಯುಲರ್ ವಾದಿಗಳ ಜೊತೆ ಸೇರಿಕೊಂಡು ಓಲೈಕೆ ರಾಜಕಾರಣ ಮಾಡುತ್ತಿದೆ. ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ, ಹಿಂದುಗಳ ಭಾವನೆಗಳಿಗೆ ಬೆಲೆ ಕೊಡದ ಸರಕಾರ ನಮ್ಮದು ಎಂದು ಹೇಳಲು ನಾಚಿಕೆ, ಪಶ್ಚಾತಾಪವಾಗುತ್ತಿದೆ. ನಾವೇನು ಪಾಕಿಸ್ತಾನದಲ್ಲಿ ಇದೇವೋ ಅಥವಾ ಭಾರತದಲ್ಲಿ ಇದ್ದೇವೊ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ. ಇತ್ತೀಚಿಗೆ ನಡೆದ ಹಿಂದು ಕಾರ್ಯಕರ್ತರ ಕೊಲೆ, ಈ ಹಿಂದಿನ ಸರಕಾರದಲ್ಲಿ ನಡೆದ ಸುಮಾರು 30ಕ್ಕೂ ಮಿಕ್ಕಿ ಹಿಂದು ಕಾರ್ಯಕರ್ತರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಹಿಂದು ಮುಂದು ನೋಡುತ್ತಿರುವ ನಮ್ಮ ಸರಕಾರ ಹಿಂದು ಮುಖಂಡರಿಗೆ ನಿರ್ಬಂಧ ವಿಧಿಸುತ್ತಿರುವುದು ಸರಿಯಲ್ಲ ಎಂದು ಹಂಗಾರಕಟ್ಟೆ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.
ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ವತಿಯಿಂದ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದ ಶುಕ್ರವಾರ ಜರಗಿದ 505 ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಕಾರ್ಯಕ್ರಮ ಆಶೀರ್ವಚನ ನೀಡಿ ಅವರು ಮಾತನಾಡಿದರು.
ದೇಶದ ಏಳು ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರು. ಧರ್ಮ ರಕ್ಷಣೆಗೆ ದೇವತೆಗಳು ಹೇಗೆ ಆಯುಧ ಹಿಡಿದರೊ ಅದೇ ರೀತಿ ಹಿಂದುಗಳು ಧರ್ಮ ರಕ್ಷಣೆಗೆ ಆಯುಧ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಮ್ಮ ದೇಶದ ನೈಜ ಇತಿಹಾಸವನ್ನು ಮರೆಮಾಚಲಾಗಿದ್ದು, ಅಂದು ನಡೆದ ಆದ್ವಾನವನ್ನು ಇನ್ನೂ ಸರಿಪಡಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಸೇರಿಸಲು ಮುಂದಾಗಿರುವುದು ಸ್ವಾಗತಾರ್ಹದುದು ಎಂದು ಅವರು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತೀಯ ಕಾರ್ಯಕಾರಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ಸಕಲ ಧರ್ಮಗಳಿಗೆ ಆಶ್ರಯ ನೀಡಿದ ಹಿಂದು ಸಮಾಜಕ್ಕೆ ನಿರಂತರವಾಗಿ ಅಪಮಾನವಾಗುತ್ತಿದೆ. ಹಿಂದು ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಸಮಾಜದ ಮುಖಂಡರಿಗೆ ನಿಷೇಧ ಹೇರಲಾಗುತ್ತಿದೆ. ವೈಯಕ್ತಿಕ ಸ್ವಾರ್ಥ ಸಾಧನೆಗೋಸ್ಕರ ಹಿಂದು ಧರ್ಮ ನಿರಂತರವಾಗಿ ತುಳಿತಕೊಳಗಾಗುತ್ತಿದೆ. ಹಿಜಾಬ್ ವಿಷಯದಲ್ಲಿ ಶಿಕ್ಷಣಕ್ಕೆ ವಿಷವಿಕ್ಕಿದ ಪಾಪಿಗಳು ನೀವು. ಹಲಾಲ್ ಹೆಸರಿನಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುತ್ತಿರುವ ನೀವು ಬದುಕಲು ಯೋಗ್ಯವಲ್ಲದ ಸಮಾಜ ಎಂದರು.
ಸನಾತನ ಹಿಂದು ಧರ್ಮ ಜಗತ್ತಿನಲ್ಲಿರುವ ಒಂದೇ ಒಂದು ಧರ್ಮ. ದೇವರು ಒಬ್ಬನೇ ಆದರೆ ಅವನನ್ನು ಸಾವಿರ ರೂಪದಲ್ಲಿ ಆರಾಧಿಸುವ ಸಮಾಜ ಹಿಂದು ಸಮಾಜ. ದೇಶದ್ರೋಹಿ, ದೇಶ ವಿರೋಧಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಮಾಜದಿಂದ ಹಿಂದು ದನಿಯನ್ನು ಅಡಗಿಸಲು ಸಾಧ್ಯವಿಲ್ಲ. ಕರಾವಳಿಯನ್ನು ಮತ್ತೊಂದು ಕಾಶ್ಮೀರ ಮಾಡಲು ಎಂದಿಗೂ ಬಿಡುದಿಲ್ಲ. ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿರುವ ಜನಪ್ರತಿನಿಧಿಗಳು ಸಿದ್ಧರಾಮಯ್ಯನಂತಹ ಅರೆಹುಚ್ಚ ಹಿಂದು ದ್ರೋಹಿಗಳಾಗಬೇಡಿ ಎಂದು ಹೇಳಿದ ಅವರು ಪವಿತ್ರವಾದ ಭಾರತ ಮಣ್ಣಿನಲ್ಲಿ ಹಿಂದು ಧರ್ಮದಲ್ಲಿ ಹುಟ್ಟಿದ ನಾವು ಈ ದರ್ಮದ ಸಮಾಜದ ದೇಶದ ಋಣ ತೀರಿಸಿ ಆ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಈ ರಾಷ್ಟ್ರವನ್ನು ಪರಮ ವೈಭವ ಭಾರತ, ಜಗತ್ತಿಗೆ ಬೆಳಕು ಜ್ಞಾನ ಸುಖ ಸಮೃದ್ಧಿ ಕೊಡುವ ಭಾರತ ನಿರ್ಮಾಣದ ಪಣ ತೊಡಬೇಕಿದೆ. ಒಟ್ಟಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳೋಣ ಎಂದು ಹೇಳಿದರು.
ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಾಯಕವಾಡಿ ಗುಜ್ಜಾಡಿ ಶ್ರೀ ಸಂಗಮೇಶ್ವರ ದೇವಸ್ಥಾನದ ಕಾರ್ಯದರ್ಶಿ ಜಿ.ಸುಬ್ಬ, ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಪಾತ್ರಿ ನಾಗರಾಜ ಖಾರ್ವಿ, ಗುಜ್ಜಾಡಿ ಬ್ರಹ್ಮ ಬಂಟರ ಗರಡಿಯ ಪಾತ್ರಿ ರಾಘವೇಂದ್ರ ಪೂಜಾರಿ, ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ್ ಉಪಸ್ಥಿತರಿದ್ದರು.
ಹಿಂಜಾವೇ ಗಂಗೊಳ್ಳಿ ಘಟಕದ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಂಗೊಳ್ಳಿ ಶ್ರೀ ರಾಮ ಮಂದಿರದ ಬಳಿಯಿಂದ ಶ್ರೀ ವೀರೇಶ್ವರ ದೇವಸ್ಥಾನದ ತನಕ ಭವ್ಯ ಶೋಭಾಯಾತ್ರೆ ನಡೆಯಿತು. ಮಹಿಳೆಯರ ಚಂಡೆ ವಾದನ, ವಾದ್ಯಘೋಷಗಳು, ಕೇಸರಿ ಪೇಟಧಾರಿಗಳು ಶೋಭಾಯಾತ್ರೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಕುಂದಾಪುರ ಡಿವೈಎಸ್‍ಪಿ ಶ್ರೀಕಾಂತ ಕೆ. ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಭದ್ರತೆಯ ಉಸ್ತುವಾರಿ ವಹಿಸಿದ್ದರು. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪಿಎಸ್‍ಐ ನಂಜಾ ನಾಯ್ಕ್ ಹಾಗೂ ಕುಂದಾಪುರ ಪೊಲೀಸ್ ಉಪವಿಭಾಗದ ಪೊಲೀಸರು ¨ಬಿಗು ಪೊಲೀಸ್ ಭದ್ರತೆ ಮಾಡಿದ್ದರು.
ಶೋಭಾಯಾತ್ರೆಯಲ್ಲಿ ಹಿಂದು ವಿರೋಧಿ ಬಿಜೆಪಿ ಸರಕಾರಕ್ಕೆ ಧಿಕ್ಕಾರ, ಹಿಂದು ವಿರೋಧಿಗಳಿಗೆ ಧಿಕ್ಕಾರ ಎಂಬ ಘೋಷಣೆಗಳು ಕೇಳಿ ಬಂದಿತು. ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದಕ್ಕೆ ಶೋಭಾಯಾತ್ರೆಯುದ್ದಕ್ಕೂ ಹಿಂದು ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.