ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕಗೆ ಉತ್ತರಕನ್ನಡ ಸಂಸದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಪತ್ನಿ ಶ್ರೀರೂಪ ಹೆಗಡೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕೆ.ಕೆ ಹೆಬ್ಬಾರ್ ವಿರಚಿತ ಡಾ.ಶಿವರಾಮ ಕಾರಂತರ ರೇಖಾಚಿತ್ರ,ಕಾರಂತರ ಮುಕಜ್ಜಿಯ ಕನಸು ,ಕಾರಂತ ಇ.ಗ್ರಂಥಾಲಯ,ಆರ್ಟ ಗ್ಯಾಲರಿ, ಭವ್ಯರಂಗಮಂದರ ವೀಕ್ಷಿಸಿ ಕಾರಂತರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರಂತರ ವಿಚಾರಧಾರೆಗಳ ಹಾಗೂ ಅವರ ಜೀವನಚರಿಗಳ ಬಗ್ಗೆ ಥೀಂ ಪಾರ್ಕ ರೂವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ವಿವರಿಸಿಕೊಂಡರು.ಇದೇ ವೇಳೆ ಕಾರಂತ ಥೀಂ ಪಾರ್ಕ ಶಿಬಿರಾರ್ಥಿಗಳು ಭವ್ಯ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿ ಕುಮಾರ್,ಥೀಂ ಪಾರ್ಕ ಮೇಲ್ವಿಚಾರಕ ಪ್ರಶಾಂತ್ ಪೂಜಾರಿ,ಸಂತೋಷ್ ಕದ್ರಿಕಟ್ಟು ಮತ್ತಿತರರು ಉಪಸ್ಥಿತರಿದ್ದರು.