ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2021 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಮೂರು ರ್ಯಾಂಕ್‍ಗಳು ದೊರಕಿವೆ.
ವಾಣಿಜ್ಯ ಪದವಿಯಲ್ಲಿ ಕುಂದಾಪುರದ ಪ್ರದೀಪ ಸಿ.ಶಾನಭಾಗ್ ಮತ್ತು ರಾಜೇಶ್ವರಿ ಇವರ ಪುತ್ರಿ ವೈಷ್ಣವಿ ಪಿ.ಶಾನಭಾಗ್ ಇವರಿಗೆ ಏಳನೇ ರ್ಯಾಂಕ್ ದೊರೆತಿದೆ.
ಕಂಪ್ಯಾಟರ್ ವಿಜ್ಞಾನ ಪದವಿಯಲ್ಲಿ ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಹೆನ್ರಿ ರೊಡ್ರಿಗಸ್ ಮತ್ತು ಗ್ರೆಟಾ ರೊಡ್ರಿಗಸ್ ಅವರ ಪುತ್ರಿ ಸೊಲಿಟಾ ರೊಡ್ರಿಗಸ್ ಅವರಿಗೆ ಮೂರನೇ ರ್ಯಾಂಕ್ ಮತ್ತು ಕುಂದಾಪುರ ತಾಲೂಕಿನ ಹಾಲಾಡಿಯ ಸುಕುಮಾರ ಶೆಟ್ಟಿ ಮತ್ತು ಸುಜಾತ ಅವರ ಪುತ್ರಿ ಸೌಜನ್ಯ ಅವರಿಗೆ ಹತ್ತನೇ ರ್ಯಾಂಕ್ ದೊರೆತಿದೆ.
ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯವರು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.