ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ದ್ರವ್ಯಗುಣ ವಿಜ್ಞಾನ ವಿಭಾಗ ಹಾಗೂ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ವತಿಯಿಂದ ಕೋಟೇಶ್ವರದಲ್ಲಿ ಅಂತರಾಷ್ಟ್ರೀಯ ಭೂಮಿ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ಪ್ರಸನ್ನಕುಮಾರ್ ಐತಾಳ್ ಹೆತ್ತವ್ವ ನಮ್ಮ ತಾಯಿಯಾದರೆ ಭೂಮಿ ಕೂಡ ನಮ್ಮ ತಾಯಿಗೆ ಸಮಾನ ಭೂತಾಯಿ ನಮ್ಮೆಲ್ಲ ಆಗುಹೋಗುಗಳನ್ನು ತಾಯಿಯಂತೆ ಸಹಿಸುತ್ತಾಳೆ ಹಾಗಾಗಿ ಭೂಮಿಯನ್ನು ರಕ್ಷಿಸುವ ಹೊಣೆಗಾರಿಕೆ ಭೂತಾಯ ಮಕ್ಕಳಾದ ನಮ್ಮೆಲ್ಲ ಕರ್ತವ್ಯ ಮುಂದಿನ ಪೀಳಿಗೆಗೆ ಸುರಕ್ಷಿತ ಭೂಮಿ ಉಳಿಸುವುದು ನಮ್ಮ ಜವಾಬ್ದಾರಿ ಎಂದರು.
ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಭೂಮಿಯ ತಾಪಮಾನ ಅತಿಯಾಗಿದ್ದು ಅದನ್ನು ನಿಯಂತ್ರಿಸಲು ಸೂಕ್ತವಾದಂತಹ ಕ್ರಮಗಳನ್ನು ಭೂಮಿಯ ಜಾಗತಿಕ ತಾಪಮಾನ ನಿಯಂತ್ರಿಸಲು ಹೆಚ್ಚು ಹೆಚ್ಚು ಸಸ್ಯ ಸಂಕುಲಗಳನ್ನು ಬೆಳೆಸಬೇಕಾಗಿದೆ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಅಧ್ಯಕ್ಷೆ ಸರಸ್ವತಿ ಗಣೇಶ ಪುತ್ರನ್ ಮಾತನಾಡಿ ಪ್ರಸ್ತುತ ವರ್ಷದಲ್ಲಿ ಭೂಮಿಯ ಮೇಲಿರುವ ಮಣ್ಣಿನ ಪದರ ಅನೇಕ ಕಾರಣಗಳಿಂದ ಸವಕಳಿಯಾಗಿ ಜೀವಸಂಕುಲಕ್ಕೆ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಮಣ್ಣಿನ ಸವಕಳಿ ಆಗದಂತೆ ತಡೆಯಲು ಜಾಗೃತಿಯನ್ನು ಅನುಸರಿಸಬೇಕಾದ ಅಗತ್ಯ ಇದೆ ಈ ನಿಟ್ಟಿನಲ್ಲಿ ಭೂಮಿಯ ಮಣ್ಣನ್ನು ಹಿಡಿದಿಟ್ಟುಕೊಳ್ಳುವಂತ ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸಿ ಸಂರಕ್ಷಿಸುವ ಅಗತ್ಯ ಇದೆ ಅಲ್ಲದೆ ಪ್ಲಾಸ್ಟಿಕ್ ಸೇರಿದಂತೆ ಪರಿಸರಕ್ಕೆ ಹಾನಿಯಾಗುತ ವಸ್ತುಗಳನ್ನು ಉಪಯೋಗದಲ್ಲಿ ಇತಿಮಿತಿಗಳೊಳಿಸಿ ಪರಿಸರ ರಕ್ಷಣೆ ಮಾಡುವಂತದ್ದು ನಾಗರಿಕ ಸಮಾಜದ್ದು ಎಂದರು.ವೇದಿಕೆಯಲ್ಲಿ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾಗದ ಡಾ.ಹರಿಪ್ರಸಾದ್ ಶೆಟ್ಟಿ, ಉಪಸ್ಥಿತರಿದ್ದರು.
ಸಭೆಯಲ್ಲಿ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಭಟ್,ಉಪ ವೈದ್ಯಕೀಯ ಅಧೀಕ್ಷಕಿ ಡಾ.ವಾಣಿಶ್ರೀ ಐತಾಳ್,ಡಾ.ನಿಶಾ ಕುಮಾರಿ,ಡಾ.ಶ್ರೀನಿವಾಸ್ ರಾವ್,ಡಾ.ಪ್ರಾಣೇಶ್ವ ವರ್ಣ,ಡಾ.ಅಕ್ಷತಾ,ಡಾ.ಶ್ರೀರಾಮ್,ಡಾ.ರಾಜೇಶ್ ಚಂದ್ರ,ಡಾ.ಅರ್ಚನಾ ಪಾಣಿಕರ್,ಲಯನ್ಸ್ ಸದಸ್ಯರಾದ ಆಶಾಲತಾ ಶೆಟ್ಟಿ, ಕಲ್ಷನಾ ಭಾಸ್ಕರ್, ಚಂದ್ರಿಕಾ ಧನ್ಯ,ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಕುಂದಾಪುರದ ಅಧ್ಯಕ್ಷ ಗಣೇಶ್ ಪುತ್ರನ್, ಉಪಸ್ಥಿತರಿದ್ದರು.ಕಾರ್ತಿಕ್ ಪ್ರಾಥಿಸಿದರು,ಡಾ.ವೀಣಾ ಕುಮಾರಿ ಸ್ವಾಗತಿಸಿದರು,ಡಾ.ರಾಘವೇಂದ್ರ ಎಲ್ ಪಿ ವಂದಿಸಿದರು,ಡಾ.ಪ್ರತೀಕ್ಷಿತಾ ನಾವುಡ ಕಾರ್ಯಕ್ರಮ ನಿರೂಪಿಸಿದರು.