ಪಂಚಾಯತ್ ರಾಜ್ ದಿನದಂದೇ ಪಂಚಾಯತ್ ಮುತ್ತಿಗೆ ಹಾಕಿದ ಪುಟಾಣಿಗಳು – “ಜಲ ಉಳಿಸಿ” ಆಂದೋಲನದಲ್ಲಿ ಭಾಗಿ

0
561

ಕುಂದಾಪುರ ಮಿರರ್ ಸುದ್ದಿ…

ಕೋಟ : ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದೇ ಕೋಟತಟ್ಟು ಗ್ರಾಮ ಪಂಚಾಯತ್‍ಗೆ ನೂರಾರು ಪುಟಾಣಿಗಳು ಮುತ್ತಿಗೆ ಹಾಕಿ ಘೋಷಣೆ ಕೂಗಿ ಮನವಿ ಸಲ್ಲಿಸಿದ ಪ್ರಸಂಗ ಕೋಟತಟ್ಟು ಗ್ರಾಮ ಪಂಚಾಯತ್‍ನಲ್ಲಿ ನಡೆದಿದೆ.

Click Here

Click Here

ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆ ಆಶ್ರಯದಲ್ಲಿ ನಡೆಯುತ್ತಿರುವ ದಿ. ಕೆ.ಸಿ ಕುಂದರ್ ಸ್ಮರಣಾರ್ಥ ಜೆ.ಸಿ ನರೇಂದ್ರ ಕುಮಾರ್ ಕೋಟ ಸಾರಥ್ಯದಲ್ಲಿ ಉಚಿತ ಬೇಸಿಗೆ ಶಿಬಿರ ಗಮನ-2022(ಮಕ್ಕಳ ಹಬ್ಬದ ದಿಮ್ಸಾಲ್ ) ಕಾರ್ಯಕ್ರಮದ ಕೊನೆಯ ದಿನದಂದು ಜಲ ಉಳಿಸಿ ಎನ್ನುವ ವಿಷಯದೊಂದಿಗೆ ಕಾರಂತ ಥೀಮ್ ಪಾರ್ಕ್‍ನಿಂದ ಅಮೃತೇಶ್ವರಿ ಮಾರ್ಗವಾಗಿ ಕೋಟತಟ್ಟು ಗ್ರಾಮ ಪಂಚಾಯತ್ ತನಕ ಸಾಗಿ ಘೋಷಣೆ ಕೂಗುತ್ತಾ ಕೈಯಲ್ಲಿ ಬಿತ್ತಿ ಪತ್ರ ಹಿಡಿದು ಜಲ ಉಳಿಸಿ ಮಿತವಾಗಿ ನೀರು ಬಳಸಿ ಎನುತ್ತಾ ಪಂಚಾಯತ್ ನ ಅಧ್ಯಕ್ಷರು, ಸದಸ್ಯರು, ಅಧಿಕಾರಿ ವರ್ಗದವರಿಗೆ ಮನವಿ ಸಲ್ಲಿಸಿ ನೀರು ಮಿತವಾಗಿ ಬಳಸುವ ಬಗ್ಗೆ ಜನರಿಗೆ ಮನವರಿಕೆಯ ಯೋಜನೆಗಳನ್ನು ಹಾಕಬೇಕಾಗಿ ಒತ್ತಾಯಿಸಿದರು.

ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಕೋಟತಟ್ಟು ಗ್ರಾಮ ಪಂಚಾಯತ್ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮಕೈಕೊಳ್ಳಲಾಗುವುದು. ನಿಮ್ಮ ಬೇಡಿಕೆಗಾಗಿ ನಿಮಗಾಗಿ ವಿಶೇಷ ಮಕ್ಕಳ ಗ್ರಾಮ ಸಭೆ ನಡೆಸಲಾಗುವುದೆಂದರು.

ಮಕ್ಕಳ ಈ ಅರಿವು ಜಾಥದ ಬಗ್ಗೆ ವ್ಯಾಪಕ ಪ್ರಶಂಸೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ಶ್ರೀವಾಸು ಪೂಜಾರಿ, ಸದಸ್ಯರಾದ ಪ್ರಮೋದ್ ಹಂದೆ, ಸತೀಶ್ ಬಾರಿಕೆರೆ, ಪ್ರಕಾಶ್ ಹಂದಟ್ಟು, ವಿದ್ಯಾ ಸಾಲಿಯಾನ್, ರವೀಂದ್ರ ತಿಂಗಳಾಯ, ಕಾರ್ಯದರ್ಶಿ ಶೇಖರ್ ಮರವಂತೆ, ಶಿಬಿರದ ಸಹ ನಿರ್ದೇಶಕ ಕುಮಾರ್ ಸಾಲಿಗ್ರಾಮ , ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್, ಕೋಟ ಪೋಲಿಸ್ ಠಾಣಾ ಸಿಬ್ಬಂದಿಗಳು , ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here