ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹಾಗೂ ಎಪ್ ಎಸ್ ಎಲ್ ಇಂಡಿಯಾದ ಜಂಟಿ ಆಶ್ರಯದಲ್ಲಿ ಅರಣ್ಯ ಇಲಾಖೆ ಮತ್ತು ಇತರ ಸರಕಾರದ ವಿವಿಧ ಇಲಾಖೆಗಳು ಹಾಗೂ ಇನ್ನಿತರ ಸೇವಾಸಂಸ್ಥೆಗಳ ಸಹಭಾಗಿತ್ವ, ಸಹಕಾರದೊಂದಿಗೆ ವಿಶೇಷವಾಗಿ ಐತಿಹಾಸಿಕವಾದ ಆಮೆ ಹಬ್ಬವನ್ನ ಕುಂದಾಪುರದ ಕೋಡಿಯಲ್ಲಿ ಆಯೋಜಿಸಲಾಗಿದೆ.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ ಮಹತ್ವಪೂರ್ಣ ಕಾರ್ಯಕ್ರಮವಾದ ಕಡಲ ಕಿನಾರೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುವ ಮುಖೇನ ಮೈಸೂರು ಸಂಸ್ಥಾನದ ರಾಜವಂಶಸ್ಥ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಿಗ್ಗೆ 7 ಗಂಟೆಗೆ ಉದ್ಘಾಟಿಸಲಿದ್ದಾರೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪರಿಸರ ಆಸಕ್ತ ಸಂಘ-ಸಂಸ್ಥೆಗಳು, ಶಾಸಕರು, ಸಂಸದರು, ಸಚಿವರು,ಪುರಸಭಾ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳನ್ನ ಆಹ್ವಾನಿಸಲಾಗುವುದು ಎಂದು ಕ್ಲೀನ್ ಕುಂದಾಪ್ರ ಪ್ರಾಜೆಕ್ಟ್ ನ ಸಂಚಾಲಕ ಭರತ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಡಲಾಮೆ ಸಂರಕ್ಷಣೆ ಕುರಿತಾದ ಮಾಹಿತಿ ಕಾರ್ಯಕ್ರಮ ಕಡಲಾಮೆ ಕುರಿತಾದ ಮರಳು ಶಿಲ್ಪ ಕಲಾಕೃತಿ ಸ್ಪರ್ಧೆ, ಕಡಲಾಮೆ ಸಂರಕ್ಷಣೆ ಕುರಿತ ಚಿತ್ರಕಲಾ ಸ್ಪರ್ಧೆ ಹಾಗೂ ಗಾಳಿಪಟ ಹಬ್ಬ ಆಯೋಜಿಸಲಾಗಿದೆ.