ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇಲ್ಲಿನ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಕ್ಷೇತ್ರದ ಭಕ್ತರ ಒಗ್ಗೂಡುವಿಕೆಯಿಂದ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಮಹಾರುದ್ರ ಯಾಗಕ್ಕಾಗಿ ಶುಕ್ರವಾರ ತಂತ್ರಿ ಪ್ರಸನ್ನಕುಮಾರ ಐತಾಳ ಅವರ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.
ಯಾಗದ ಕುರಿತು ಮಾತನಾಡಿದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಹೊಳ್ಳ, ಕುಂದಾಪುರದ ಹೆಸರಿಗೆ ಅನ್ವರ್ಥವಾಗಿರುವ ಕುಂದೇಶ್ವರ ದೇವಸ್ಥಾನದ ಸಾನಿಧ್ಯದ ಶಕ್ತಿ ವರ್ಧನೆಗಾಗಿ ಕಳೆದ ೧೦ ವರ್ಷಗಳಿಂದ ಅಷ್ಟ ಬಂಧ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶಕ್ಕೆ ಸುಭೀಕ್ಷವಾಗಬೇಕು ಹಾಗೂ ಲೋಕಕಲ್ಯಾಣವಾಗಬೇಕು ಎನ್ನುವ ಸದುದ್ದೇಶದಿಂದ ಕಲ್ಪತರು ಚಂದ್ರಶೇಖರ ಅವರ ನೇತ್ರತ್ವದ ಸ್ವಾಗತ ಸಮಿತಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೇತ್ರತ್ವದಲ್ಲಿ ಮಹಾರುದ್ರ ಯಾಗವನ್ನು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಸಂಜೆಯಿಂದ ಯಾಗದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಶನಿವಾರ ಹಾಗೂ ಭಾನುವಾರ ರುದ್ರ ಪಠಣ ನಡೆಯಲಿದೆ. ಸೋಮವಾರ ಮಹಾರುದ್ರ ಯಾಗಕ್ಕೆ ಫುರ್ಣಾಹುತಿ ಮಾಡಲಾಗುವುದು. ರುದ್ರ ಕಲಶ ಸ್ಥಾಪನೆ ಮಾಡಲಾಗಿದೆ. ಭಾನುವಾರ ನವಗ್ರಹ ಹೋಮ, ರುದ್ರ ಪುರಶ್ಚರಣೆ, ಕಲಶಾಭಿಷೇಕ, ಅಷ್ವಧಾನ ನಡೆಯಲಿದೆ. ಸೋಮವಾರ ಮಹಾರುದ್ರ ಯಾಗ ಪ್ರಾರಂಭ, ಪೂರ್ಣಾಹುತಿ, ಕಲಶಾಭಿಷೇಕ, ಅನ್ನಸಂತರ್ಪಣೆ, ಸಂಜೆ ರಂಗ ಪೂಜೆ ಅಷ್ಟವಧಾನ ಹಾಗೂ ದೇವರ ಪುರ ಮೆರವಣಿಗೆ ನಡಯಲಿದೆ ಎಂದು ತಿಳಿಸಿದ್ದಾರೆ.