ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಕ್ಷೇತ್ರದ ಭಕ್ತರ ಒಗ್ಗೂಡುವಿಕೆಯಿಂದ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಮಹಾರುದ್ರ ಯಾಗಕ್ಕಾಗಿ ಸೋಮವಾರ ಮಧ್ಯಾಹ್ನ ತಂತ್ರಿ ಪ್ರಸನ್ನಕುಮಾರ ಐತಾಳ ಅವರ ನೇತ್ರತ್ವದಲ್ಲಿ ಪೂರ್ಣಾಹುತಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಯಾಗದ ಸ್ವಾಗತ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕಲ್ಪತರು, ಕಾರ್ಯದರ್ಶಿ ಸುಬ್ರಮಣ್ಯ ಹೊಳ್ಳ, ಕಿಶೋರ ಹೆಗ್ಡೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕಿದಿಯೂರು ಸತೀಶ್ ಶೆಟ್ಟಿ, ನಾಗರಾಜ್ ರಾಯಪ್ಪನಮಠ, ವಿಶ್ವನಾಥ ಪೂಜಾರಿ, ಜಯಾನಂದ ಖಾರ್ವಿ, ಸತೀಶ್, ವೀಣಾ ಹೆಚ್, ಸವಿತಾ ಜಗದೀಶ್, ಡಿವೈಎಸ್ಪಿ ಶ್ರೀಕಾಂತ್ ಕೆ, ಸರ್ಕಲ್ ಇನ್ಸಪೆಕ್ಟರ್ ಗೋಪಿಕೃಷ್ಣ, ನಗರಾಭಿವೃಧ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಣಿಗೋಪಾಲ, ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಎಚ್. ಬಾಲಚಂದ್ರ ಭಟ್, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಬೆಂಗಳೂರಿನ ಉದ್ಯಮಿ ದಿನೇಶ್ ಕುಂದಾಪುರ, ಪುರಸಭೆಯ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ, ಉದ್ಯಮಿಗಳಾದ ಸುಬ್ರಾಯ ಹಾಲಂಬಿ, ಸೀತಾರಾಮ ನಕ್ಕತ್ತಾಯ, ಶ್ರೀಧರ ಆಚಾರ್, ಸಚಿನ್ ನಕ್ಕತ್ತಾಯ, ಡಾ.ಎಂ.ರವೀಂದ್ರನಾಥ್, ಉದಯ್ ಶೇಟ್, ನವೀನ್‌ಕುಮಾರ ಹೆಗ್ಡೆ, ರಾಜೀವ್ ಕೋಟ್ಯಾನ್, ನಾರಾಯಣ ದೇವಾಡಿಗ ಇದ್ದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಮೋಹನ್‌ದಾಸ್ ಶೆಣೈ ಮಹಾರುದ್ರ ಯಾಗ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಅರ್ಚಕರಿಂದ ತೀರ್ಥ, ಪ್ರಸಾದ ಪಡೆದು ತೆರಳಿದ್ದರು.
ಸೋಮವಾರ ಬೆಳಿಗ್ಗೆಯಿಂದ ಆರಂಭವಾದ ಮಹಾರುದ್ರ ಯಾಗಕ್ಕೆ ಮಧ್ಯಾಹ್ನ ಪೂರ್ಣಾಹುತಿ ನೀಡಲಾಗಿದೆ. ಯಾಗಕರ್ತರಲ್ಲದೆ, ಬೆಳ್ಳಿಯ ಕಲಶ ಸೇವೆಯನ್ನು ನೀಡಿದ ಸೇವಾಕರ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.ಕಲಶಾಭಿಷೇಕ ಹಾಗೂ ಮಹಾ ಮಂಗಳರಾತಿಯ ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕಾರ ಮಾಡಿದ್ದರು. ಸಂಜೆ ರಂಗ ಪೂಜೆ ಅಷ್ಟವಧಾನ ಹಾಗೂ ದೇವರ ಪುರ ಮೆರವಣಿಗೆ ನಡೆಯಿತು.