ಸಾಸ್ತಾನದ ಪಾಂಡೇಶ್ವರ ಡಾ. ಶ್ರೀ ವಿಜಯ ಮಂಜರ್ ನೇತ್ರತ್ವದಲ್ಲಿ ನಿರ್ಮಾಣಗೊಂಡ ಅಷ್ಟಾಂಗ ಯೋಗ ಗುರುಕುಲ ಶಾಲೆ ಉದ್ಘಾಟನೆ
ಕುಂದಾಪುರ ಮಿರರ್ ಸುದ್ದಿ…
ಕೋಟ: ಯೋಗದಲ್ಲಿ ಅಷ್ಟಾಂಗ ಯೋಗವು ತತ್ವಸಿದ್ಧಿಗಾಗಿ ಹಾಗೂ ಸಂಶೋಧನಾ ಕೇಂದ್ರವಾಗಿ ರೂಪುಗೊಂಡಿದೆ ಎಂದು ಮೈಸೂರು ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ನ್ಯಾಯಶಾಸ್ತ್ರ ಪ್ರಾಧ್ಯಾಪಕ ವಿದ್ವಾನ್ ಗಂಗಾಧರ್ ವಿ ಭಟ್ ಹೇಳಿದ್ದಾರೆ.
ಸಾಸ್ತಾನದ ಪಾಂಡೇಶ್ವರ ಡಾ. ವಿದ್ವಾನ್ ಶ್ರೀ ವಿಜಯ ಮಂಜರ್ ನೇತ್ರತ್ವದಲ್ಲಿ ನಿರ್ಮಾಣಗೊಂಡ ಅಷ್ಟಾಂಗ ಯೋಗ ಗುರುಕುಲ ಶಾಲೆ ಇದರ ಉದ್ಘಾಟನೆ ಹಾಗೂ ಏಕದಶೋತ್ತರ ಶತಾಧಿಕ ಸಹಸ್ರ ನಾಳಿಕೇರ ಗಣಯಾಗ ಧಾರ್ಮಿಕ ಸಭಾಕಾರ್ಯಕ್ರಮ ಹಾಗೂ ಯೋಗಶಾಲೆ ಉದ್ಘಾಟಿಸಿ ಮಾತನಾಡಿ ಯೋಗ ಇಂದು ಎಲ್ಲಾ ಜಾತಿ ಧರ್ಮವನ್ನು ಮೀರಿ ವಿಶ್ವವ್ಯಾಪಿಯಾಗಿ ಕಂಗೊಸಿಸುತ್ತಿದೆ ಎನ್ನುವುದಕ್ಕೆ ಇಲ್ಲಿನ ಶಿಷ್ಯವೃಂದವೇ ಸಾಕ್ಷಿ,ಯೋಗದ ಮೂಲಕ ತ್ಯಾಗದ ಅನುಭವನ್ನು ಕಾಣುವುದರ ಜೊತೆಗೆ ಶರೀರವನ್ನು ಪ್ರಯೋಗಶಾಲೆಯಾಗಿಸಲು ಸಾಧ್ಯ ಎಂಬುವುದನ್ನು ವಿಶ್ವಕ್ಕೆ ತೋರ್ಪಡಿಸಿದೆ. ಯೋಗದ ಮೂಲಕ ಗುರುಪರಂಪರೆಯ ಶ್ರೇಷ್ಠತೆಯನ್ನು ಮೆರೆಯುವುದರ ಜೊತೆಗೆ ಭಾರತೀಯತೆಯ ಮೌಲ್ಯಗಳನ್ನು ರಷಿಪರಂಪರೆಯ ಮೂಲಕ ಎತ್ತಿ ಹಿಡಿದಿದೆ,ವಿಜಯ ಮಂಜರ್ ಈ ಗ್ರಾಮೀಣ ಭಾಗದಲ್ಲಿ ಯೋಗದ ಕ್ರಾಂತಿಯನ್ನೆ ಪಸರಿಸಿದ್ದಾರೆ.ಅಷ್ಟಾಂಗ ಯೋಗ ಶಾಲೆ ಹೆಮ್ಮೆಯ ಪ್ರತೀಕವಾಗಿದೆ ಎಂದು ತಮ್ಮ ಶಿಷ್ಯನ ಕುರಿತು ಗುಣಗಾನಗೈದರು.
ಈ ಸಂದರ್ಭದಲ್ಲಿ ಶಿಷ್ಯವರ್ಗದವರಾದ ಪ್ರಸಾದ್ ಭಟ್ ಹಾಗೂ ವಿದೇಶಿ ಯೋಗ ಶಿಷ್ಯವೃಂದದವರನ್ನು ಸನ್ಮಾನಿಸಲಾಯಿತು.ಯೋಗ ಗುರುಕುಲದ ನಿರ್ಮಾಣ ಕೈಂಕರ್ಯದಲ್ಲಿ ತೊಡಗಿಕೊಂಡ ಹಲವರನ್ನು ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಸರಕಾರದ ಧಾರ್ಮಿಕಪರಿಷತ್ ಸದಸ್ಯ ವೇ.ಬ್ರ.ಗೋವಿಂದ ಭಟ್,ಉಡುಪಿಯ ಟಿ.ಎಂ.ಎ.ಪೈ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ದಿನೇಶ್ ನಾಯಕ್ ಉಪಸ್ಥಿತರಿದ್ದರು.
ಯೋಗಗುರುಕುಲದ ಸ್ಥಾಪಕ ಡಾ.ವಿಜಯ ಮಂಜರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿ ವಂದಿಸಿದರು.
ಕಾರ್ಯಕ್ರಮವನ್ನು ಚೇತನಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಗಣೇಶ್ ಜಿ ಚೆಲ್ಲಮಕ್ಕಿ ನಿರೂಪಿಸಿದರು.
ಪೂರ್ವಾಹ್ನ ಧಾರ್ಮಿಕ ಕಾರ್ಯಕ್ರಮದ ಸಲುವಾಯ 1,111ತೆಂಗಿನ ಕಾಯಿಯ ನಾಳಿಕೇರಗಣಯಾಗ,ಪೂರ್ಣಾಹುತಿ,ಮಂತ್ರಾಕ್ಷತೆ,ಅನ್ನಸಂತರ್ಪಣೆ, ವಿದ್ವಾನ್ ಸುಧಾಮ್ ದಾನಗೇರಿ ಮತ್ತು ತಂಡದಿಂದ ದಾಸವಾಣಿ ಕಾರ್ಯಕ್ರಮ ಜರಗಿತು.