ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತಿಚಿಗೆ ಕೋಟದ ಹಂದೆ ದೇವಸ್ಥಾನದ ರಥೋತ್ಸವದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಅಪರೂಪದ ಪರಂಪರೆಯ “ಸೈಂಧವ ವಧೆ” ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳ, ವೇಷಭೂಷಣ, ಮುಖವರ್ಣಿಕೆ, ಕಟ್ಟುಮಿಸೆ, ಕೃಷ್ಣನ ಒಡ್ಡೋಲಗ, ಪರಂಪರೆಯ ಭಾಗವತಿಕೆ ಅಲ್ಲದೆ ಹಿಂದೆ ಹಾರಾಡಿ ಕುಷ್ಯ ಗಾಣಿಗರನ್ನು ನೆನಪಿಸುವ ಸುಜಯೀಂದ್ರ ಹಂದೆಯವರ ಅರ್ಜುನನ ಪಾತ್ರದ ಕೆಲವು ಸನ್ನಿವೇಷ ಹೀಗೆ ಯಕ್ಷದೇಗುಲ ಪ್ರದರ್ಶನವು ಆದಷ್ಟು ಪರಂಪರೆಗೆ ಕೊಂಡೊಯ್ಯುವುದರೊಂದಿಗೆ ಒಂದು ಉತ್ತಮ ಪ್ರದರ್ಶನ ನೀಡಿತು.
ಈ ಪ್ರದರ್ಶನಕ್ಕೆ ಹಿಮ್ಮೇಳದಲ್ಲಿ ಚಂದ್ರಕಾಂತರಾವ್ ಮೂಡ್‍ಬೆಳ್ಳೆ, ಲಂಬೋದರ ಹೆಗಡೆ, ಶಿವಾನಂದ ಕೋಟ, ಪರಮೇಶ್ವರ ಭಂಡಾರಿ, ರಾಘವೇಂದ್ರ ಹೆಗಡೆ, ಸುದೀಪ ಉರಾಳ ಭಾಗವಹಿಸಿದರು. ಮುಮ್ಮೇಳದಲ್ಲಿ ಸುಜಯೀಂದ್ರ ಹಂದೆ, ಅಶೋಕ ಆಚಾರ್, ಕೃಷ್ಣಮೂರ್ತಿ ಉರಾಳ್, ಸ್ಪೂರ್ತಿ ಭಟ್, ಅಜಿತ್ ಅಂಬಲಪಾಡಿ, ನವೀನ್ ಕೋಟ, ಸುಹಾಸ್ ಕರಬ ರವರು ಭಾಗವಹಿಸಿದರು.