ಕುಂದಾಪುರ ಮಿರರ್ ಸುದ್ದಿ…
ಕೋಟ: ಅಮೇಚುರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಇವರು ನಡೆಸಿದ ಕರ್ನಾಟಕ ರಾಜ್ಯ ಅಂಡರ್ 20 ಕಿರಿಯರ ಹಾಗೂ ಹಿರಿಯರ, ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ ಮೀಟ್- 2022ರಲ್ಲಿ ನಡೆದ 20ರ ವಯೋಮಿತಿಯ ವಿಭಾಗದಲ್ಲಿ ಅಖಿಲೇಶ್ ಕೋಟ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ನೂತನ ದಾಖಲೆ ಮಾಡಿದ್ದಾರೆ. ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗುಜರಾತ್‍ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಜಯಪ್ರಕಾಶ್ ಮತ್ತು ಸುಮನ ದಂಪತಿಗಳ ಪುತ್ರನಾಗಿರುವ ಇವರು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಸಂತ್ ಜೋಗಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬಿ.ಡಿ.ಶೆಟ್ಟಿ ಕಾಲೇಜು ಮಾಬುಕಳ ಇಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.