ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: 2021-22ನೇ ಸಾಲಿನ ಎಸ್‍ಎಸ್‍ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕುಂದಾಪುರ ಶೈಕ್ಷಣಿಕ ವಲಯದ ಕಾಳಾವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಶಾ 625ರಲ್ಲಿ 625 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಇವರು ಕಾಳಾವರದ ಶ್ರೀನಿವಾಸ ಜೋಗಿ ಮತ್ತು ಆಶಾ ದಂಪತಿಗಳ ಪುತ್ರಿ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿ ವೈದ್ಯೆಯಾಗುವ ಇಚ್ಛೆಯನ್ನು ನಿಶಾ ವ್ಯಕ್ತ ಪಡಿಸುತ್ತಾರೆ.