ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪದವಿ ಪೂರ್ವಕಾಲೇಜು ಕುಂದಾಪುರ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 173 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 13 ವಿದ್ಯಾರ್ಥಿಗಳು ಅನುತ್ತಿರ್ಣರಾಗುವುದರ ಮೂಲಕ ಶೇ 93% ಪಲಿತಾಂಶ ದಾಖಲಾಗಿದ್ದು, ವಿಶಿಷ್ಟ ಶ್ರೇಣಿಯಲ್ಲಿ ಸುಮಾರು 49 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಅನ್ವಿತಾ 614 ಅಂಕ ಪಡೆದು ಸಂಸ್ಥೆಗೆ ಪ್ರಥಮ ಸ್ಥಾನ, ಉಷಾ 612 ಅಂಕ ಪಡೆದು ದ್ವಿತೀಯ ಹಾಗೂ ಶ್ರೇಯಸ್ ಕುಮಾರ್ 610 ಅಂಕ ಪಡೆದು ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಸುಮಾರು 10 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿರುತ್ತಾರೆ.