ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಮಣೂರು ಪಡುಕರೆ ಸಂಯುಕ್ತ ಫ್ರೌಢಶಾಲೆ ಇದರ ವಿದ್ಯಾರ್ಥಿಗಳು ಎಸ್‍ಎಸ್‍ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳಾದ ಪ್ರಗತಿ ಎನ್ ಜಿ 622, ಸಾಕ್ಷಿ 605, ಮಾನ್ಯ 600ಅಂಕ ಗಳಿಸಿ ಸಾಧನೆಗೈದಿದ್ದಾರೆ.ಕಡಲ ತಡಿಯ ಸಂಯುಕ್ತ ಫ್ರೌಢಶಾಲೆಯೊಂದು ಕಳೆದ ಹಲವಾರು ವರ್ಷಗಳಿಂದ ವಿಶೇಷ ರೀತಿಯಲ್ಲಿ ಸಾಧನೆಗೈಯುತ್ತಿದ್ದು ಇಲ್ಲಿ ಮಣೂರು ಗೀತಾನಂದ ಫೌಂಡೇಶನ್ ಎಸ್ ಎಸ್ ಎಲ್ ಸಿ ತರಬೇತಿ ಕಾರ್ಯಗಾರವನ್ನು ನಿರಂತರವಾಗಿ ಹಮ್ಮಿಕೊಂಡುಬರುತ್ತಿದೆ.