ಭಜನೆಗಳು ಹಿಂದೂ ಧರ್ಮದ ಸಂಸ್ಕಾರದ ತೋರಣಗಳಿದ್ದಂತೆ – ಬಾಳೆಕುದ್ರು ಶ್ರೀ

0
415

ಕುಂದಾಪುರ ಮಿರರ್ ಸುದ್ದಿ…

ಕೋಟ: ಭಜನೆಗಳ ಮೂಲಕ ದೇವರನ್ನು ಹತ್ತಿರದಲ್ಲಿ ಸ್ಪರ್ಶಿಸುವ ಹಾಗೂ ಹಿಂದೂ ಧರ್ಮದ ತೋರಣಗಳಂತೆ ಕಾಣಬಹುದಾಗಿದೆ ಎಂದು ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ.

ಬಾಳೆಕುದ್ರು ಶ್ರೀಮಠದಲ್ಲಿ ಶ್ರೀ ರಾಮ ಮಾತೃ ಮಹಿಳಾ ಭಜನಾ ಮಂಡಳಿ ಚಿಕ್ಕಮ್ಮಸಾಲು ಕುಂದಾಪುರ ,ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಇವರ ನೇತ್ರತ್ವದಲ್ಲಿ 4ನೇ ಬಾರಿಯ ಮನೆ ಮನೆ ಭಜನಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಆಶ್ರ್ರೀವಚನ ನೀಡಿ ಮಾತನಾಡಿ ಭಜನೆಗಳ ಮೂಲಕ ದೇವರನ್ನು ಸದಾ ನೆನೆಯುವ ಜೊತೆಗೆ ಮಾನಸಿಕ ನೆಮ್ಮದಿಗೆ ಪೂರಕ ವಾತಾವರಣ ಕಲ್ಪಿಸುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ಭಜನೆ ಮನೆ ಮನೆಯಲ್ಲೂ ಸಂಚಲನ ಮೂಡಿಸಿ ಈ ಕರಾವಳಿ ಭಾಗದ ಶಕ್ತಿಯಾಗಿ ರೂಪುಗೊಂಡಿದೆ.ಇದನ್ನು ಮುಂದಿನ ತಲೆಮಾಡಿಗೆ ಕೊಂಡ್ಯೊಯಬೇಕಾದರೆ ಇಂದಿನ ಯುವ ಸಮುದಾಯಕ್ಕೆ ಅದರ ಮಹತ್ವ ಸಾರಬೇಕಿದೆ.

Click Here

ಮನೆ ಮನೆ ಭಜನೆಯಿಂದ ಆರೋಗ್ಯವಂತ ಸಮಾಜ ನಿರ್ಮಿಸುವ ಜೊತೆಗೆ ನಮ್ಮ ಸಂಸ್ಕ್ರತಿಯನ್ನು ಉಳಿಸಿದ ಸಂತೃಪ್ತಿ ಸಿಗುತ್ತದೆ.ಈ ದಿಸೆಯಲ್ಲಿ ಭಜನೆ ನಿಂತ ನಿರಾಗದೆ ನಿರಂತವಾಗಿ ಜಗದಗಲ ಪಸರಿಸಿಕೊಳ್ಳಲಿ ಎಂದು ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಜಯಕರ ಪೂಜಾರಿ ಗುಲ್ವಾಡಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ವತಿಯಿಂದ ತುಳಸಿ ಹಾರತೊಡಿಸಿ ಫಲಪುಷ್ಭ ನೀಡಿ ಗೌರವಿಸಲಾಯಿತು.ಶ್ರೀ ಮಠದ ವತಿಯಿಂದ ಸ್ವಾಮೀಜಿಗಳು ಮಂತ್ರಾಕ್ಷತೆ ನೀಡಿ ಪ್ರಸಾದ ವಿತರಿಸಿದರು.

ಮುಖ್ಯ ಅತಿಥಿಯಾಗಿ ಮಂತ್ರಾಲಯದ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಹನುಮೇಶ್ ಆಚಾರ್ , ಕಾರ್ಯಕ್ರಮ ಸಂಯೋಜಕಿ ರಶ್ಮಿರಾಜ್ ,ಶ್ರೀರಾಮ ಮಾತೃ ಮಹಿಳ ಭಜನಾ ಮಂಡಳಿಯ ಕಾರ್ಯದರ್ಶಿ ಸುಜಾತ ಅಶೋಕ್ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಅಧ್ಯಕ್ಷೆ ಸರೋಜ ವಿ ಮೂರ್ತಿ ಸ್ವಾಗತಿಸಿದರು.ಸದಸ್ಯೆ ಶಕುಂತಲ ಪ್ರಾಸ್ತಾವನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಕುಂದಾಪುರ ವಲಯ ಭಜನಾ ಒಕ್ಕೂಟದ ಅಧ್ಯಕ್ಷ ನಿತಿನ್ ವಿಠ್ಠಲವಾಡಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here