ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಶಿರೂರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕಾ ತೆರಳಿದ ದೋಣಿಯೊಂದು ಮುಳುಗಡೆಯಾಗಿದ್ದು ಅದಲ್ಲಿದ್ದ, ಮೀನುಗಾರರನ್ನು ರಕ್ಷಿಸಿದ ಘಟನೆ ನಡೆದಿದೆ.
ಶಿರೂರು ನಾಖುದಾ ಮೊಹಲ್ಲಾದಿಂದ ಬೀಬಿ ಆಮೀನಾ (𝙸𝙽𝙳-𝙺𝙰-03-𝙼𝙾-3937) ಎಂಬ ದೋಣಿಯು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ವೇಳೆ ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಿದೆ. ದೋಣಿಯಲ್ಲಿದ್ದ ಐದು ಜನ ಮೀನುಗಾರರು ಪ್ರಾಣಾಪಾಯದಿಂದ ಪಾರು ಮಾಡಿ ಸುರಕ್ಷಿತವಾಗಿ ಕರೆತರಲಾಗಿದೆ. ಮೀನುಗಾರರಾದ ಸದ್ಕೆ ಮುಷ್ತಾಕ್, ರೋಗೆ ಅಬೂಬಕ್ಕರ್, ಭೋಂಬಾ ಮೀರಾ, ದಾಂಡಯ್ಯ ಅಶ್ರಫ್, ಬೋಡರ್ನಿ ಶಬ್ಬೀರ್ ಅಪಾಯದಿಂದ ರಕ್ಷಿಸಲಾಗಿದೆ.