ತೆಕ್ಕಟ್ಟೆ – ಮಳಲುತಾಯಿ ದೇವಳದಲ್ಲಿ ಬ್ರಹ್ಮಕಲಶಾಭಿಷೇಕ,ಜಾತ್ರೋತ್ಸವ ಸಂಪನ್ನ

0
593

ಕುಂದಾಪುರ ಮಿರರ್ ಸುದ್ದಿ…

ಕೋಟ: ಮಣೂರು ಶ್ರೀ ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇವಳದ ನೂತನ ದೇಗುಲ ಸಮರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಬ್ರಹ್ಮಕಲಶಾಭಿಷೇಕ ,ಗೆಂಡೋತ್ಸವ,ತುಲಾಭಾರ ಸೇವೆ ಕಾರ್ಯಕ್ರಮ ಸಂಪನ್ನಗೊಂಡಿತು.

Click Here

ವೈದಿಕ ಕಾರ್ಯಕ್ರಮವನ್ನು ವೇ.ಮೂ.ಪಡುಕೋಣೆ ರಾಜೇಶ್ ಹೆಬ್ಬಾರ್ ನೇತ್ರತ್ವದಲ್ಲಿ ವೇ.ಮೂ.ನಿಲಾವರ ಕೃಷ್ಣ ಅಡಿಗ ಆಚಾರ್ಯತ್ವದಲ್ಲಿ ವೇ.ಮೂ ಮಣೂರು ಚಂದ್ರಶೇಖರ ಅಡಿಗ ಸಹಯೋಗದೊಂದಿಗೆ ಸಂಪನ್ನಗೊಳಿಸಲಾಯಿತು.

ಶನಿವಾರ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು,ಭಾನುವಾರ ವಾರ್ಷಿಕ ಗೆಂಡೋತ್ಸವ ,ಸೋಮವಾರ,ಢಕ್ಕೆ ಬಲಿ, ತುಲಾಭಾರ ಸೇವೆಗಳು,ಅನ್ನಸಂತರ್ಪಣೆ ಕಾರ್ಯಕ್ರಮ ಸಹಸ್ರ ಭಕ್ತಾಧಿಗಳ ಸಮ್ಮುಖದಲ್ಲಿ ನೆರವೆರಿತು.

ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ ಆರ್ ಶೆಟ್ಟಿ,ಕಂಬಳಗದ್ದೆ ಮನೆತನದ ಡಾ.ಜಿತೇಂದ್ರ ಶೆಟ್ಟಿ ,ವಿಜಯ ಕುಮಾರ್ ಶೆಟ್ಟಿ,ಪ್ರಕಾಶ್ ಶೆಟ್ಟಿ ಪಟೇಲರಮನೆ,ಆನಂದ್ ಶೆಟ್ಟಿ, ಎಂ.ಎಸ್ ಸಂಜೀವ,ಪಂಚಾಯತ್ ಸದಸ್ಯ ಪ್ರಶಾಂತ್ ಹೆಗ್ಡೆ,ಮಹೇಶ್ ಶೆಟ್ಟಿ, ಶಿರಿಯಾರ ನರಸಿಂಹ ಪೂಜಾರಿ,ರಾಜೇಶ್ ಕಂಬಳಗದ್ದೆ,ಪ್ರಶಾಂತ್ ಶೆಟ್ಟಿ,ಸುರೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here