ಕುಂದಾಪುರ ಮಿರರ್ ಸುದ್ದಿ…
ಕೋಟ: ಆಂದ್ರ ಪ್ರದೇಶದಲ್ಲಿ ನಡೆದ ಸೌತ್ ಇಂಡಿಯ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಸ್ಪರ್ಧೆಯ 120 ಕೆ.ಜಿ. ವಿಭಾಗದಲ್ಲಿ ತೀವ್ರ ಹಣಾಹಣಿಯ ನಡುವೆ ಸೌಜನ್ ಕುಮಾರ್ ಸಾಲಿಗ್ರಾಮ ಚಿನ್ನದ ಪದಕ ಪಡೆದಿದ್ದಾರೆ.
ಈಗಾಗಲೇ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಹತ್ತು ಹಲವಾರು ದಾಖಲೆ ಬರೆದಿರುವ ಇವರು ಸಾಲಿಗ್ರಾಮದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಮತ್ತು ಪಟ್ಟಣಪಂಚಾಯತ್ ಸದಸ್ಯೆ ರತ್ನ ನಾಗರಾಜ್ ಗಾಣಿಗ ಅವರ ಸುಪುತ್ರರಾಗಿದ್ದಾರೆ.