ಗುಂಡ್ಮಿ – ಮೇ.26 ರಂದು ದಿ.ಕಾಳಿಂಗ ನಾವುಡ ಸಂಸ್ಮರಣಾ ಕಾರ್ಯಕ್ರಮ

0
268

ಕುಂದಾಪುರ ಮಿರರ್ ಸುದ್ದಿ…

ಕೋಟ: ಯಕ್ಷಗಾನ ಭಾಗವತಿಗೆಯಲ್ಲಿ ಕ್ರಾಂತಿ ಪುರುಷ ಎನಿಸಿಕೊಂಡ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿಯ ವಿದ್ಯಾರ್ಥಿಯಾಗಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿದ್ದ ದಿ| ಕಾಳಿಂಗ ನಾವುಡರ ಸಂಸ್ಮರಣಾ ಕಾರ್ಯಕ್ರಮವು ಮೇ 26 ರಂದು ಯಕ್ಷಗಾನ ಕಲಾಕೇಂದ್ರದ ಗುಂಡ್ಮಿಯಲ್ಲಿರುವ ಸದಾನಂದ ರಂಗ ಮಂಟಪದಲ್ಲಿ ಆಯೋಜಿಸಲಾಗಿದೆ.

Click Here

Click Here

ಕಾಳಿಂಗ ನಾವಡರ ಕುರಿತು ನೆನಪಿನ ಮಾತುಗಳನ್ನು ಹಿರಿಯ ಯಕ್ಷಗಾನ ಕಲಾವಿದ, ನಾವುಡರ ಸಹವರ್ತಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಮಾಡಲಿದ್ದಾರೆ. ಕಾಳಿಂಗ ನಾವುಡರ ನೆನಪಿನಲ್ಲಿ ಕೊಡಮಾಡುವ “ನಮ್ಮ ಕಾಳಿಂಗ” ಪ್ರಶಸ್ತಿಯನ್ನು ಹಿರಿಯ ಕಲಾವಿದ, ಒಡನಾಡಿ ಎಂ.ಎ.ನಾಯ್ಕರಿಗೆ ಪ್ರದಾನ ಮಾಡಲಿದ್ದು, ಸಭಾಕಾರ್ಯಕ್ರಮದ ನಂತರ ಮಯ್ಯ ಯಕ್ಷ ಬಳಗದವರಿಂದ ವಿಜಯ ವಿಸ್ಮಯ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆಯಂದು ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿರುತ್ತಾರೆ.

Click Here

LEAVE A REPLY

Please enter your comment!
Please enter your name here