ಜನರಿಗೆ ಸೇವೆ ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ತರ-ಬಿ.ಅಪ್ಪಣ್ಣ ಹೆಗ್ಡೆ

0
668
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ  :ಆರ್ಥಿಕವಾಗಿ ಬಹಳಷ್ಟು ಬೆಳೆಯಬೇಕಾದ ಅವಶ್ಯಕತೆ ಇದ್ದು ಅದಕ್ಕೆ ಪೂರಕವಾಗಿ ಜನರಿಗೆ ಬೇಕಾದಂತಹ ಮಾಹಿತಿ, ಸೌಲಭ್ಯಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದು ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
Video :
https://youtu.be/cgW7wPhZy1s
ಅವರು ಮಾರ್ಗೋಳಿ ಸಮೀಪದ ರಾಮಕೃಷ್ಣ ಕಾಂಪ್ಲೆಕ್ಸ್ ಮೇರ್ಡಿ ಇಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಶನೇಶ್ವರ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕುಗಳು ರಾಷ್ಟ್ರೀಕರಣಗೊಳಿಸಲಾಗಿದೆ. ಆದರೆ ಜನರಿಗೆ ಸೂಕ್ತ ಸೇವೆ  ಕೊಡುವಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ಖೇದಕರವಾದುದು. ಅವಿಭಜಿತ ದ.ಕ.ಜಿಲ್ಲೆಯಲ್ಲಿ ೫ ಬ್ಯಾಂಕುಗಳು ಜನ್ಮತಾಳಿದ್ದು ಹಾಗೂ ಉತ್ತಮ ಸೇವೆ ನೀಡುತ್ತಾ ಬಂದಿರುತ್ತದೆ. ಇಂದು ಶಾಖೆಗೆ ಹೋದರೆ ಜನರಿಗೆ ಉತ್ತಮ ಸೇವೆ ಸಿಗುತ್ತಿಲ್ಲ, ಆ ಸೇವೆಯ ಕೊರತೆಯನ್ನು ತುಂಬುವ ಕೆಲಸ ಸಹಕಾರ ಸಂಘಗಳು ಮಾಡುತ್ತದೆ ಎಂದರು. ಈ ಸೌಹಾರ್ದ ಸಹಕಾರಿ ಸಂಘ ಗ್ರಾಹಕರಿಗೆ ಉತ್ತಮ ಸೇವೆ, ಸೌಲಭ್ಯವನ್ನು ನೀಡುವ ಮೂಲಕ ಸಂಸ್ಥೆ ಯಶಸ್ವಿಯಾಗಿ ಬೆಳೆಯಲಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶನೇಶ್ವರ ಮಹಿಳಾ ಸೌಹಾರ್ದ ಸಹಕಾರಿ ಸಂಘ, ನಿ ಅಧ್ಯಕ್ಷೆ ನಾಗರತ್ನ ಮಹಾಲಿಂಗ ಮಾರ್ಗೊಳಿ ವಹಿಸಿದ್ದರು.

ಠೇವಣಿ ಹಾಗೂ ಷೇರು ಪತ್ರವನ್ನು ಉಡುಪಿ ಜಿಲ್ಲಾ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಅಧ್ಯಕ್ಷ ಭಾಸ್ಕರ್ ಕಾಮತ್ ಬಿಡುಗಡೆಗೊಳಿಸಿದರು.

ಗಣಕೀಕರಣವನ್ನು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನಾಧಿಕಾರಿ ಶೆಶಿರೇಖಾ ಉದ್ಘಾಟಿಸಿದರು.

Click Here

Click Here

ಕಾರ್ಯಕ್ರಮದಲ್ಲಿ ರಾಜೀವ ಶೆಟ್ಟಿ ಶಿರೂರು, ಬಸ್ರೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಭಾಸ್ಕರ ಪೂಜಾರಿ,  ಶ್ರೀ ಶನೀಶ್ವರ ದೇವಸ್ಥಾನದ ಅಧ್ಯಕ್ಷ ಮಹಾಲಿಂಗ ಮಾರ್ಗೋಳಿ, ಕಾರ್ಯದರ್ಶಿ ಗೋವಿಂದ ಮಾರ್ಗೊಳಿ. ರಂಜಿತ ಮಾರ್ಗೋಳಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀರಾಮ್ ಸ್ವಾಗತಿಸಿದರು. ಮಹೇಶ್ ಎಮ್.ಜಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅನಿತಾ ಪ್ರಾರ್ಥನೆಗೈದರು.

Click Here

LEAVE A REPLY

Please enter your comment!
Please enter your name here