ಕುಂದಾಪುರ ಮಿರರ್ ಸುದ್ದಿ…
ಕೋಟ: ಗ್ರಾಮೀಣ ಭಾಗವಾದ ಕೋಟತಟ್ಟಿವ ಹಂದಟ್ಟು ಮಹಿಳಾ ಸಹಕಾರಿ ಹಾಲು ಉತ್ಪಾದಕ ಸಂಘಕ್ಕಿಗ ಬೆಳ್ಳಿ ಹಬ್ಬದ ಸಂಭ್ರಮ.
1998ರಲ್ಲಿ ಹಂದಟ್ಟು ಪರಿಸರದ ಜಾನಕಿ ಹಂದೆಯವರ ನೇತ್ರತ್ವದಲ್ಲಿ ಆರಂಭಗೊಂಡ ಈ ಸಂಘ ಸಾಕಷ್ಟು ಸಾಮಾಜಿಕ ಕಾರ್ಯಗಳ ನಡುವೆ ಉನ್ನತಿ ಸಾಧಿಸಿ ಇದೀಗ ರಜತ ಮಹೋತ್ಸವ ದಿನಗಳನ್ನು ಕಾಣುತ್ತಿದೆ ಆ ಪ್ರಯುಕ್ತ ಇದೇ ಬರುವ ಮೇ.28ರಂದು ಪೂರ್ವಾಹ್ನ ಸಂಘದ ಕಛೇರಿ ಸ್ತ್ರೀ ಶಕ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡಿದೆ.
ಕಾರ್ಯಕ್ರಮವನ್ನು ರಾಜ್ಯದ ಸಮಾಜಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘಸಂಸ್ಥೆಗಳನ್ನು ಗುರುತಿಸಿ ಗೌರವಿಸಲಿದೆ.ಎಂದ ಸಂಘದ ಅಧ್ಯಕ್ಷೆ ಜಾನಕಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.