ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿ ಅಕ್ಷಯ ಶಾಸ್ತ್ರೀ 10ನೇ ತರಗತಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 623/625 ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ. ಈತ ಸರಕಾರಿ ಪ್ರೌಢಶಾಲೆ, ಮಣೂರು ಇಲ್ಲಿಯ ಶಿಕ್ಷಕ ಶ್ರೀಧರ ಶಾಸ್ತ್ರೀ, ಗುಂಡ್ಮಿ ಮತ್ತು ಮಂಜುಳಾ ದಂಪತಿಯ ಪುತ್ರರಾಗಿದ್ದಾರೆ. ವಿವೇಕ ವಿದ್ಯಾಸಂಸ್ಥೆಯ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.