ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೇಂದ್ರ ಮತ್ತು ರಾಜ್ಯ ಸರಕಾರಗಳ ನೆರವಿನೊಂದಿಗೆ ಕೃಷಿ, ತೋಟಗಾರಿಕೆ, ಜಲಾನಯನ ಮತ್ತು ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇವರ ಸಹಕಾರದಲ್ಲಿ ಆರಂಭಗೊಂಡ ವಂಡ್ಸೆ ಹೋಬಳಿಯ ಕುಂದನಾಡು ರೈತ ಉತ್ಪಾದಕರ ಕಂಪೆನಿ ಇದೇ ಜೂನ್ 19ರಂದು ಅಂಪಾರು ವಿದ್ಯಾದಾಯಿನಿ ಸಭಾಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕುಂದನಾಡು ರೈತ ಉತ್ಪಾದಕ ಕಂಪೆನಿಯನ್ನು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಲಿದ್ದಾರೆ. ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಬಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ಬಿ.ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿಗಳಾದ ಕೂರ್ಮಾರಾವ್, ರೈತರ ಉತ್ಪಾದಕರ ಸಂಸ್ಥೆಗಳ ಕೇಂದ್ರ ಬೆಂಗಳೂರು ಇದರ ನಿರ್ದೇಶಕರಾದ ಡಾ.ಅಶೋಕ ಆಲೂರ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಉಡುಪಿ ಜಿಲ್ಲಾ ಜಂಟೀ ಕೃಷಿ ನಿರ್ದೇಶಕ ಕೆಂಪೇಗೌಡ ಹೆಚ್, ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರಾದ ಶ್ರೀಮತಿ ಭುವನೇಶ್ವರಿ, ಅಟಲ್ ಇನ್ಕ್ಯೊಬೇಷನ್ ಸೆಂಟರ್ ನಿರ್ದೇಶಕರಾದ ಡಾ.ಎ.ಪಿ ಆಚಾರ್, ಅಂಪಾರು ಗ್ರಾ.ಪಂ ಅಧ್ಯಕ್ಷರಾದ ಜಯಂತಿ ಭಾಗವಹಿಸಲಿದ್ದಾರೆ.