ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನಬಾರ್ಡ್‍ನ ಡಿ.ಜಿ.ಎಮ್ ರವಿಶಂಕರ್‍ರವರ ನೇತೃತ್ವದಲ್ಲಿ ಕೇರಳ ಮತ್ತು ಕರ್ನೂಲ್ (ಆಂಧ್ರ)ದ 25 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ನಿರ್ದೇಶಕರು ಭೇಟಿ ನೀಡಿದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ ತಿಮ್ಮ ಪೂಜಾರಿ ಸ್ವ ಸಹಾಯ ಗುಂಪುಗಳ ವ್ಯವಹಾರ, ಕೃಷಿ/ಕೃಷಿ ಪೂರಕ ಸಾಲಗಳ ವ್ಯವಹಾರ, ಬೇಸಾಯೇತರ ಸಾಲದ ವ್ಯವಹಾರದ ಕುರಿತು ವಿಚಾರ ವಿನಿಮಯ ನಡೆಸಿದರು. ಹಾಗೆಯೇ ಸಂಘದ ಆಂತರಿಕ ಆಡಳಿತಾತ್ಮಕ ಕ್ರಮಗಳ ಬಗ್ಗೆ, ಆಡಳಿತ ಸಭೆ ಮತ್ತು ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಗಳನ್ನು ನಡೆಸುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸಂಘದ ಪ್ರಗತಿ ಮತ್ತು ಸಂಘವು ಸ್ವಂತ ನಿವೇಶನ ಖರೀದಿಸಿ ನಿರ್ಮಿಸಲುದ್ದೇಶಿಸಿರುವ ನೂತನ ಕಟ್ಟಡಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ರವೀಂದ್ರ ಕಾಮತ್, ಗೀತಾ ಶಂಭು ಪೂಜಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು.