ಕೋಟದ ಮೂಡುಗಿಳಿಯಾರು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಯೋಗಬನ- ಅಂತಾರಾಷ್ಟ್ರೀಯ ಯೋಗೋತ್ಸವ ಕಾರ್ಯಕ್ರಮ

0
1665

ಕುಂದಾಪುರ ಮಿರರ್ ಸುದ್ದಿ…

ಕೋಟ: ಸರ್ವರ ಹಿತ ಕಾಯುವ ಸರ್ವಕ್ಷೇಮ ಯೋಗಬನವೆಂಬುವುದು ಚೈತನ್ಯ ತುಂಬುವ ತಾಣವಾಗಿ ರೂಪುಗೊಂಡಿದೆ ಎಂದು ಮೂಡುಬಿದ್ರೆ ಶ್ರೀ ಜೈನಮಠದ ಡಾ.ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚ್ಯಾರ್ಯವರ್ಯ ಮಹಾಸ್ವಾಮಿಜೀ ಹೇಳಿದರು.

8ನೇ ಅಂತಾರಾಷ್ಟ್ರೀಯ ಯೋಗೋತ್ಸವ ಕಾರ್ಯಕ್ರಮದ ಅಂಗವಾಗಿ ಕೋಟದ ಮೂಡುಗಿಳಿಯಾರು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಯೋಗಬನ ಇದರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಆರ್ಶೀವಾಚನ
ನೀಡಿ ಡಿವೈನ್ ಪಾರ್ಕ ಮೂಲಕ ಯೋಗವನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿ ಈ ಸಂಸ್ಥೆಗೆ ಲಭಿಸಬೇಕು. ಇಂಥಹ ಸಂಸ್ಥೆ ಇಲ್ಲಿ ನಿರ್ಮಿಸಿದ ವಾತಾವರಣ ಸಾವಿರ ಕಂಬದ ಬಸದಿಯಷ್ಟೆ ಶ್ರೇಷ್ಠತೆಯನ್ನು ಹೊಂದಿದೆ. ವಿಶ್ವಕ್ಕೆ ಯೋಗವನ್ನು ಧಾರೆ ಎರೆದ ಕೀರ್ತಿ ಭಾರತದದ್ದಾದರೆ ಸರ್ವಕ್ಷೇಮ ಆಸ್ಪತ್ರೆ ಸರ್ವರ ಆರೋಗ್ಯ ಕಾಪಾಡುವ ಸ್ವರ್ಗೀಯ ತಾಣವಾಗಿ ರೂಪುಗೊಂಡಿದೆ, ಯೋಗ ಋಷಿ ಮುನಿಗಳ ಕೊಡುಗೆಯನ್ನು ಸ್ಮರಸಿದ ಸ್ವಾಮೀಜಿ , ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಂಡು ಉಚಿತವಾಗಿ ನೀಡುವ ಸೇವಾ ಕೈಂಕರ್ಯದ ಮೂಲಕ ಸಂಶೋಧನಾ ಕೇಂದ್ರವಾಗಿಸಿದ ಡಾ.ಜೀ ಹಾಗೂ ವಿವೇಕ ಉಡುಪರ ಕಾರ್ಯವನ್ನು ಶ್ಲಾಘಿಸಿದರು. ಹರಿಯುವ ನೀರಿನಂತೆ ನಿತ್ಯನಿರಂತರವಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಸರ್ವಕ್ಷೇಮ ಯೋಗಬನ ಜಗತ್ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು

ಡಿನ್ ಮಣಿಪಾಲ ಕಾಲೇಜು ಆಫ್ ಹೆಲ್ತ್ ಪ್ರೋಫೆಷನಲ್ಸ್ ಇದರ ಡಾ.ಜಿ.ಅರುಣ್ ಮಯ್ಯ ವಿಶೇಷ ಸಂಶೋಧನಾ ಮಾಹಿತಿ ನೀಡಿ ಪ್ರತಿಯೊರ್ವನು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ ಆದರೆ ಪ್ರಸ್ತುತ ಕಾಲಘಟ್ಟದ ಜೀವನ ಪದ್ಧತಿಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ ಇದರಿಂದ ಪ್ರತಿಯೊರ್ವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದಕ್ಕೆ ಪರಿಹಾರಕಂಡುಕೊಳ್ಳಲು ಸಮಕ್ಕೆ ಸರಿಯಾಗಿ ಆಹಾರ ಕ್ರಮ ಪಡೆದುಕೊಳ್ಳುವುದು, ಜೀವನ ಶೈಲಿಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಂಡು ಸಮೃದ್ಧ ಜೀವನಕ್ಕೆ ಪ್ರತಿದಿನ ಯೋಗಾಭ್ಯಸ ಮಾಡುವುದು ಒಳಿತು ಇದು ಸಂಶೋಧನೆಯಿಂದ ತಿಳಿದುಬಂದಿರುವ ಸತ್ಯದ ವಿಚಾರವಾಗಿದೆ. ಉಡುಪಿ ಜಿಲ್ಲೆಯಲ್ಲಿ ಸೃಷ್ಠಿಗೊಂಡ ಈ ಯೋಗಬನ ಸರ್ವರ ಆರೋಗ್ಯ ಕಾಪಾಡುವ ತಾಣವಾಗಿ ಪ್ರಚಲಿತಗೊಂಡಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸರ್ವಕ್ಷೇಮ ಯೋಗಬನ ಚಿತ್ರಣ ಬಿಂಬಿಸುವ ಪರಿಚಯ ಪುಸ್ತಕವನ್ನು ಸ್ವಾಮೀಜಿಗಳು ಅನಾವರಣಗೈದರು.

Click Here

Click Here

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಹೆಚ್ ಯೋಗಬನದ ಡಿಜಿಟಲ್ ಮಾಹಿತಿ ತಾಣವನ್ನು ಅನಾವರಣಗೈದರು.

ಸಾಲಿಗ್ರಾಮದ ಡಿವೈನ್ ಪಾರ್ಕ ಆಡಳಿತ ನಿರ್ದೇಶಕ ಪೂಜ್ಯ ಡಾಕ್ಟರ್ ಜೀ ದಿವ್ಯ ಉಪಸ್ಥಿತಿಯ ಮೂಲಕ ಯೋಗದಿನದ ಮಹತ್ವವನ್ನು ಸಾರಲಾಯಿತು.

ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ , ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಉಡುಪಿ ಜಿಲ್ಲಾ ಪ್ರವಾಸೋಧ್ಯಮ ಇಲಾಖೆಯ ಸಮಾಲೋಚಕ ಭವಿಷ್ಯ ಕುಮಾರ್ ಉಪಸ್ಥಿತರಿದ್ದರು.

ಸರ್ವಕ್ಷೇಮ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಿಇಓ, ವೈದ್ಯಕೀಯ ನಿರ್ದೇಶಕ ಡಾ.ವಿವೇಕ್ ಉಡುಪ ಸ್ವಾಗತಿಸಿದರು. ಯೋಗಬನದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಾನಸ ಉಡುಪ ಪ್ರಾರ್ಥನೆ ಸಲ್ಲಿಸಿದರು. ಸಂಶೋದನಾ ಕೇಂದ್ರದ ಮಾಹಿತಿಯನ್ನು ಗಣೇಶ್ ನೀಡಿದರು. ಕಾರ್ಯಕ್ರಮವನ್ನು ಯೋಗಬನದ ಯೋಗಗುರು ಷಣ್ಮುಗ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here