ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕುಂದಾಪುರ ಎಂಟನೇ ವಿಶ್ವ ಯೋಗ ದಿನಾಚರಣೆಯ ಉದ್ಘಾಟನೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಸತೀಶ್ ಖಾರ್ವಿ ಉದ್ಘಾಟಿಸಿದರು.
ಡಾಕ್ಟರ್ ಕಾವ್ಯ ಹೆಗ್ಡೆ ಯೋಗ ಮತ್ತು ಆರೋಗ್ಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಅವರು ಮಾತನಾಡಿ ಯೋಗ ವಿಶ್ವಕ್ಕೆ ಭಾರತೀಯರ ಅಮೂಲ್ಯ ಕೊಡುಗೆ. ಯೋಗವು ಮನಸ್ಸು, ಶರೀರ ಆಲೋಚನೆ, ಕ್ರಿಯೆ ಸಂಯಮ, ಸಾರ್ಥಕತೆ ಮಾನವ ಹಾಗೂ ನಿಸರ್ಗದ ನಡುವಿನ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರಾಮಕಷ್ಣ ಬಿಜಿ, ಪುರಸಭೆಯ ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ, ಉಪ ಪ್ರಾಂಶುಪಾಲೆ ಪ್ರೀತಿಕಾ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮಡಿವಾಳ ಎಂ ಮತ್ತು ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮಡಿವಾಳ ಎಂ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿನಿ ಬಹುಮುಖ ಪ್ರತಿಭೆ ಯೋಗಪಟು ಮಹಿಮಾ ಕುಂದಾಪುರ ಯೋಗ ಪ್ರದರ್ಶನ ನಡೆಯಿತು