ಗುಂಡ್ಮಿ-ಸಮಸ್ತರು ಬೆಂಗಳೂರು ಇವರು ರಸರಂಗ ಕೋಟ ಇದರ ಸಹಯೋಗದಲ್ಲಿ ಇವ ನಮ್ಮವ ರಂಗ ಸಂವಾದ

0
237

ಕುಂದಾಪುರ ಮಿರರ್ ಸುದ್ದಿ…

ಕೋಟ: ಒಬ್ಬ ಅಧ್ಯಾಪಕನಾದವನು ಶಾಲೆಗೆ ಬರುವ ಮಗುವಿನ ಎಲ್ಲಾ ವಿಭಾಗದ ಬೆಳವಣಿಗೆಯತ್ತ ಹೆಚ್ಚಿನ ಪ್ರಯತ್ನ ನಡೆಸಬೇಕು. ಆ ಕಾರಣದಿಂದಲೇ ಶಾಲೆಗಳಲ್ಲಿ ಪಾಠದೊಂದಿಗೆ ಕ್ರೀಡೆ,ಸೇವಾದಳ ಸಾಂಸ್ಕ್ರತಿಕ ಚಟುವಟಿಕೆ ಮುಂತಾದವುಗಳಿಗೂ ಮಹತ್ವ ನೀಡಿದೆ ಎಂದು ನಟ ನಿರ್ದೇಶಕ ಸಂಘಟಕ ಹಾಗೂ ನಿವೃತ್ತ ಅಧ್ಯಾಪಕ ನರಸಿಂಹ ಮಧ್ಯಸ್ಥ ನುಡಿದರು.

ಅವರು ಸಮಸ್ತರು ಬೆಂಗಳೂರು ಇವರು ರಸರಂಗ ಕೋಟ ಇದರ ಸಹಯೋಗದಲ್ಲಿ ಹಂಗಾರಕಟ್ಟೆ ಕಲಾಕೇಂದ್ರದ ಸಹಕಾರದಲ್ಲಿ ಸದಾನಂದ ರಂಗಮಂಟಪ ಗುಂಡ್ಮಿಯಲ್ಲಿ ನಡೆದ ಇವ ನಮ್ಮವ ರಂಗ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ವೃತ್ತಿಯಾಗಲಿ ಹವ್ಯಾಸವಾಗಲಿ ಕಲೆ ಒಬ್ಬ ನಿರ್ದೇಶಕನ ಶಿಸ್ತಿಗೆ ಒಳಪಟ್ಟಾಗಲೇ ಪ್ರದರ್ಶನ ಯಶಸ್ವೀಯಾಗುತ್ತದೆ ಎಂದರು.

Click Here

Click Here

ಸಮಸ್ತರು ನಿರ್ದೇಶಕರಾದ ಗೋಪಾಲಕೃಷ್ಣ ನಾಯರಿ ಅಧ್ಯಕ್ಷತೆ ವಹಿಸಿದ್ದರು.

ಸಂವಾದಕ ಮಿತ್ರರಾಗಿ ಪೆÇ್ರ.ಉಪೇಂದ್ರ ಸೋಮಯಾಜಿ,ಶ್ರೀಪತಿ ಹೇರಳೆ,ರಾಮಚಂದ್ರ ಐತಾಳ್,ಶಿವಾನಂದ ಕೋಟ,ಸುದರ್ಶನ ಉರಾಳ,ನರಸಿಂಹ ತುಂಗರು ಸಹಕರಿಸಿದರು.
ಹಂಗಾರಕಟ್ಟೆ ಕಲಾಕೇಂದ್ರದ ಸಂಚಾಲಕರಾದ ಐರೋಡಿ ರಾಜಶೇಖರ ಹೆಬ್ಬಾರ್,ರಸರಂಗದ ಅಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದಿದ್ದರು.

Click Here

LEAVE A REPLY

Please enter your comment!
Please enter your name here