ಯುವ ಜನತೆಯಿಂದ ಕೃಷಿ, ಪರಿಸರ ಸಂರಕ್ಷಣೆಯ ಕಾರ್ಯ ಶ್ಲಾಘನೀಯ – ಡಾ.ವಾಣಿಶ್ರೀ ಐತಾಳ

0
433

ಕುಂದಾಪುರ ಮಿರರ್ ಸುದ್ದಿ…

ಕೋಟ :ಆಸುಪಾಸಿನ ಗ್ರಾಮದ ಜನತೆಯಲ್ಲಿ ಪರಿಸರ ಮತ್ತು ಕೃಷಿಯನ್ನು ಸಂರಕ್ಷಿಸುವ ಬಗ್ಗೆ ಮಾಹಿತಿ ನೀಡಿ, ಅವರಲ್ಲಿ ಜಾಗೃತಿ ಮೂಡಿಸುತ್ತಿರುವ ಪಂಚವರ್ಣದಂತಹ ಸಂಘಟನೆಯ ಯುವ ಸಮೂಹದ ಕಾರ್ಯ ಶ್ಲಾಘನೀಯ ಎಂದು ಸಾಲಿಗ್ರಾಮದ ಪ್ರಸಿದ್ಧ ವೈದ್ಯೆ ಡಾ.ವಾಣಿಶ್ರೀ ಐತಾಳ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲದ ಹಾಗೂ ಪಂಚವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ಭಾನುವಾರ ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ಸಾಲಿಗ್ರಾಮ ವಿಪ್ರ ಮಹಿಳಾ ಬಳಗ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್, ಕಾರ್ಕಡ ಗೆಳೆಯರ ಬಳಗದ ಸಹಯೋಗದಲ್ಲಿ ಕೋಟ ಗಿಳಿಯಾರಿನಲ್ಲಿ ನಡೆದ ಪ್ರತಿ ತಿಂಗಳ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ೧೭ನೇ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಕರನ್ನು ಸನ್ಮಾನಿಸುವ ಇಂತಹ ಕಾರ್ಯಕ್ರಮಗಳು ಇತರರಿಗೂ ಮಾದರಿಯಾಗಿದೆಯಲ್ಲದೇ, ಕೃಷಿಕರಲ್ಲಿ ಮತ್ತಷ್ಟು ಆಸಕ್ತಿ ಬೆಳೆಸುತ್ತದೆ ಎಂದರು.

Click Here

Click Here

ಪ್ರಗತಿಪರ ಕೃಷಿಕ ಬೋಜ ಪೂಜಾರಿ ಮಾತನಾಡಿ ಗ್ರಾಮೀಣ ಭಾಗದ ಹಿರಿಯ ಕೃಷಿಕರು ಯುವ ಕೃಷಿಕರಿಗೆ ಮಾರ್ಗದರ್ಶಕರಾಗಿ ಕೃಷಿಯನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.

ಇದೇ ಸಂದರ್ಭ ಗಿಳಿಯಾರಿನ ಪ್ರಗತಿಪರ ಯುವ ಕೃಷಿಕ ರಾಘವೇಂದ್ರ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ತಾಯಿ ಗೋಪಿ ದೇವಾಡಿಗ ಅವರನ್ನು ಗೌರವಿಸಲಾಯಿತು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್‌ ಜೋಗಿ, ಉಪಾಧ್ಯಕ್ಷ ಮನೋಹರ್ ಪೂಜಾರಿ,ಕಾರ್ಕಡ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ತಾರನಾಥ ಹೊಳ್ಳ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಕೆ.ಶ್ರೀಕಾಂತ್ ಶೆಣೈ, ಗಿಳಿಯಾರು ಯುವಕ ಮಂಡಲ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೇರ್ಳೆ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಪಾ, ಪಂಚವರ್ಣದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ ಇದ್ದರು.

ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ, ವಂದಿಸಿದರು. ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ಸುಜಾತ ಮಹೇಶ್ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಪರಿಸರ ಜಾಗೃತಿ ಗೋಸ್ಕರ ಗಿಡ ನೆಟ್ಟು ಸಂಕಲ್ಪಿಸುವ ಕಾರ್ಯಕ್ರಮ ಪ್ರತಿ ರೈತ ಸಾಧಕನ ಮನೆಯ ವಠಾರದಲ್ಲಿ ಹಮ್ಮಿ ಕೊಳ್ಳಲಾಯಿತು.

Click Here

LEAVE A REPLY

Please enter your comment!
Please enter your name here