ರಾಜಸ್ತಾನ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸಬೇಕು – ಹಿಂದೂ ಮಹಾ ಸಭಾ ಆಗ್ರಹ

0
437

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆಯನ್ನು ಖಂಡಿಸಿ ಹಿಂದೂ ಜನ ಜಾಗೃತಿ ಸಮಿತಿ,ಹಿಂದೂ ಮಹಾ ಸಭಾವು ಗೃಹಸಚಿವರಿಗೆ ಕುಂದಾಪುರದ ಸಹಾಯಕ ಕಮೀಷನರ್ ಕೆ.ರಾಜು ಅವರ ಮೂಲಕ ಶನಿವಾರ ಮನವಿಯನ್ನು ಸಲ್ಲಿಸಿತು.

ಹಿಂದೂಗಳನ್ನು ಮತ್ತು ಪ್ರಧಾನಮಂತ್ರಿಯವರನ್ನು ಸಹ ಇದೇ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಹೇಳಿರುವುದು ಖಂಡನೀಯ. ರಾಜಸ್ಥಾನದ ಕಾಂಗ್ರೆಸ್ ಆಡಳಿತದ ಮುಸಲ್ಮಾನ್ ಓಲೈಕೆಯ ಫಲವಾಗಿ ಮತಾಂಧ ಶಕ್ತಿಗಳು ಹಿಂದೂಗಳನ್ನು ನಾಮವಶೇಷ ಮಾಡುವ ಕೃತ್ಯವು ಮುಂದುವರೆದಿದೆ. ಇದು ಹಿಂದೂಗಳ ಅಸ್ತಿತ್ವದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.

Click Here

Click Here

ರಾಜಸ್ಥಾನ ಸರ್ಕಾರದ ಮುಸಲ್ಮಾನ ಸಮುದಾಯದ ಓಲೈಕೆಯ ನೀತಿಯಿಂದಾಗಿ, ಮತಾಂಧ ಶಕ್ತಿಗಳು ಕುಮ್ಮಕ್ಕಿನಿಂದ ಹಿಂದೂಗಳ ಹತ್ಯಾಖಾಂಡವನ್ನು ಮಾಡುತ್ತಿರುವುದು ಗಮನಕ್ಕೆ ಬರುತ್ತದೆ. ಇದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ರಾಜಸ್ಥಾನದಲ್ಲಿ ಹಿಂದೂಗಳ ಅಸ್ತಿತ್ವದ ಪ್ರಶ್ನೆ ನಿರ್ಮಾಣವಾಗಿದೆ ಮತ್ತು ಅಲ್ಲಿ ಅಲ್ಪಸಂಖ್ಯಾತರಿಂದ ಹಿಂದೂ ಸಮುದಾಯವು ಅಪಾಯದಲ್ಲಿರುವುದರ ದ್ಯೋತಕವಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರವು ಈ ಎಲ್ಲ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಮತ್ತು ರಾಜಸ್ಥಾನದ ಹಿಂದೂಗಳ ರಕ್ಷಣೆಗೆ ದಾವಿಸಬೇಕು ಮತ್ತು ಅಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾದ ರಾಜಸ್ಥಾನ ಸರ್ಕಾರವನ್ನು ವಜಾ ಮಾಡಬೇಕು. ತಪ್ಪಿತಸ್ತರ ಮೇಲೆ ಉಗ್ರ ಕ್ರಮ ಜರುಗಿಸಬೇಕು ಹಾಗೂ ಹಿಂದೂಗಳಿಗೆ ರಕ್ಷಣೆಯನ್ನು ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಮನವಿಯಲ್ಲಿ ಉಲ್ಲೇಖಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಉಮೇಶ್, ರಾಮಕೃಷ್ಣ ಶೆಟ್ಟಿ ರಘುವೀರ್ ನಗರಕರ್, ಕುಂದಾಪುರ ಪ್ರತಾಪ್ ಸೌಕೂರು ಮುಂತಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here