ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಎ.ಏಫ್.ಐ) ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಕುಂದಾಪುರದ ಹೋಟೆಲ್ ಶರೊನ್ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎ.ಏಫ್.ಐ ಜಿಲ್ಲಾಧ್ಯಕ್ಷ ಡಾ.ಎನ್.ಟಿ ಅಂಚನ್ ಪಡುಬಿದ್ರಿ ಅವರು ವೈದ್ಯರ ದಿನಾಚರಣೆಯ ಮಹತ್ವ, ಸಮಾಜಕ್ಕೆ ವೈದ್ಯರ ಕೊಡುಗೆಗಳನ್ನು ವಿಸ್ತ್ರತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶವಾದ ಆರ್ಡಿ, ಗೋಳಿಯಂಗಡಿ ಭಾಗದಲ್ಲಿ ಕಳೆದ 51 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ. ಪರಮೇಶ್ವರ್ ಉಡುಪ ಗೋಳಿಯಂಗಡಿ, ಕುಂದಾಪುರ ದೇವಿ ನರ್ಸಿಂಗ್ ಹೋಮ್ ಆಡಳಿತ ನಿರ್ದೇಶಕ, ಖ್ಯಾತ ಫಿಸಿಷಿಯನ್ ಡಾ. ಮಾನಂಜೆ ರವೀಂದ್ರ ರಾವ್ ಮತ್ತು ಸುಮಾರು 50,000ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿರುವ ಖ್ಯಾತ ಸ್ತ್ರೀರೋಗ ಮತ್ತು ಹೆರಿಗೆ ತಜ್ಞೆ ಶ್ರೀಮತಿ ಡಾ. ಭವಾನಿ ರವೀಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಡಾ.ಸತೀಶ್ ರಾವ್, ಉಡುಪಿ ತಾಲೂಕಿನ ಕಾರ್ಯದರ್ಶಿ ಡಾ. ಸಂದೀಪ್ ಸನಿಲ್ ಉಪಸ್ಥಿತರಿದ್ದರು.
ಡಾ.ಪರಮೇಶ್ವರ್ ಉಡುಪ, ಡಾ.ರವೀಂದ್ರ ರಾವ್ ಡಾ.ಭವಾನಿ ರಾವ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕುಂದಾಪುರ ಎ.ಏಫ್.ಐ ಅಧ್ಯಕ್ಷ ಡಾ. ರವೀಂದ್ರ ತಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಡಾ.ಸಬಿತಾ ಆಚಾರ್ಯ ಪ್ರಾರ್ಥನೆ ನೆರವೇರಿಸಿದರು. ಡಾ.ಎ. ಎ.ಶೆಟ್ಟಿ ಗೋಳಿಅಂಗಡಿ, ಡಾ. ಪೌರವ ಶೆಟ್ಟಿ, ಡಾ.ಪ್ರವೀಣ್ ಶೆಟ್ಟಿ ನಾಗೂರು, ಡಾ ವಿಜಯಲಕ್ಷ್ಮಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಡಾ. ಸೋನಿ ಡಿ ಕೋಸ್ಟ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಖ್ಯಾತ ಚರ್ಮರೋಗ ತಜ್ಞ ಡಾ. ಅರುಣ್ ಶೆಟ್ಟಿ ಇವರಿಂದ psoriasis management ಬಗ್ಗೆ ಸಿ.ಎಂ.ಇ ಕಾರ್ಯಕ್ರಮ ನಡೆಯಿತು. ಎ.ಏಫ್.ಐ ಕುಂದಾಪುರ ಕಾರ್ಯದರ್ಶಿ ಡಾ. ರಾಜೇಶ್ ಶೆಟ್ಟಿ ವಂದಿಸಿದರು.