ಕುಂದಾಪುರ ಮಿರರ್ ಸುದ್ದಿ…
ಕೋಟ: ವಿಶ್ವ ವೈದ್ಯರ ದಿನಾಚರಣೆಯು ಪ್ರಯುಕ್ತ ಕರ್ನಾಟಕ ಸರಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಇವರ ಆಶ್ರಯದಲ್ಲಿ ಜಿಲ್ಲಾ ಆಯುಷ್ ಕಚೇರಿ ಉಡುಪಿಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಉದ್ಯಾವರ ಇದರ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಪೂಜಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ದೈನಂದಿನ ಚಿಕಿತ್ಸೆಯಲ್ಲಿ ಆಯುರ್ವೇದದ ಪಾತ್ರ” ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಆಯುಷ್ ಆಸ್ಪತ್ರೆ ಉಡುಪಿಯ ಹಿರಿಯ ವೈದ್ಯಾಧಿಕಾರಿ ಡಾ. ದಿನಕರ ಡೋಂಗ್ರೆ, ಕರ್ನಾಟಕ ಸರಕಾರಿ ಆಯುಷ್ ವೈದ್ಯಾಧಿಕರಿಗಳ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಅಶೋಕ್ ಎಚ್, ಕರ್ನಾಟಕ ಸರಕಾರಿ ಆಯುಷ್ ವೈದ್ಯಾಧಿಕರಿಗಳ ಸಂಘ ಉಪಾಧ್ಯಕ್ಷ ಡಾ.ನೀತಾ ಜೋಗನ್ ಉಪಸ್ಥಿತರಿದ್ದರು.
ಕೆ.ಜಿ.ಎ.ಎಂ.ಓ.ಎ ಅಧ್ಯಕ್ಷ ಡಾ.ಶ್ಯಾಮರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಆಯುಷ್ಯ್ ಅಧಿಕಾರಿಗಳಾದ ಡಾ.ಸತೀಶ್ ಹಾಗೂ ಡಾ.ನಾಗರಾಜ ಪುಜಾರಿ ಇವರನ್ನು ಸನ್ಮಾನಿಸಲಾಯಿತು.
ವೈದ್ಯರಾದ ಸುಜಾತ ಶೆಟ್ಟಿ ಸ್ವಾಗತಿಸಿದರು. ಡಾ. ನೀತಾ ಜೋಗನ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಕೆ.ಜಿ.ಎ.ಎಂ.ಓ.ಎ ಕಾರ್ಯದರ್ಶಿ ಡಾ. ಸರ್ವೋತ್ತಮ ಶೆಟ್ಟಿ ವಂದನಾರ್ಪಣೆಗೈದರು.ಡಾ. ಹೇಮಲತಾ ಕಾರ್ಯಕ್ರಮವನ್ನು ನಿರೂಪಣೆಗೈದರು.
ಈ ವೇಳೆ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಶ್ರಮದ ಅಶ್ರಮವಾಸಿಗಳಿಗೆ ರಕ್ತದೊತ್ತಡ ಪರೀಕ್ಷೆ ಮಧುಮೇಹ ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣೆ ಮಾಡಲಾಯಿತು. ಅಶ್ರಮವಾಸಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಇದರ ಎಲ್ಲಾ ವೈದ್ಯಾಧಿಕರಿಗಳು ಭಾಗವಹಿಸಿದರು.