ಹಂಗಳೂರು ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0
377

ಅಧ್ಯಕ್ಷರಾಗಿ ರಜತ್ ಹೆಗ್ಡೆ ಅಧಿಕಾರ‌ ಸ್ವೀಕಾರ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಹಂಗಳೂರು ಲಯನ್ಸ್ ಕ್ಲಬ್ ನ 2022- 23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಬಸ್ರೂರು ಮೂರು ಕೈ ಸಮೀಪದ ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ನಲ್ಲಿ ನಡೆಯಿತು.

Video:

Click Here

Click Here

ಪದಪ್ರದಾನ ನೆರವೇರಿಸಿ‌ ಮಾತನಾಡಿದ ಜಿಲ್ಲಾ ಗವರ್ನರ್ ಎನ್.ಎಮ್.ಹೆಗ್ಡೆ ಹಂಗಳೂರು ಲಯನ್ಸ್ ಕ್ಲಬ್ ಕುಂದಾಪುರದ ಭಾಗದಲ್ಲಿ ಮಾನವೀಯ ಮೌಲ್ಯಗಳನ್ನ ಎತ್ತಿ ಹಿಡಿಯುವ ನಿರಂತರ ಕೆಲಸ ಮಾಡಿಕೊಂಡು ಬಂದಿದ್ದು ಶ್ಲಾಘನೀಯ. ಸಮಾಜ ಸೇವೆ ಮಾಡುವುರಿಂದ ವ್ಯಕ್ತಿತ್ವ ವಿಕಸನಕ್ಕೆ ಅವಕಾಶಗಳಿದ್ದು ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಸೇವೆಯಲ್ಲಿ ತೋರಬೇಕು ಎಂದರು.

ಲಯನ್ಸ್ ಕ್ಲಬ್ ಹಂಗಳೂರು ಇದರ ನೂತನ ಅಧ್ಯಕ್ಷ ರಜತ್ ಹೆಗ್ಡೆ, ಕಾರ್ಯದರ್ಶಿ ವಿಲ್ಫ್ರೇಡ್ ಮೆನೆಜಸ್, ಖಜಾಂಚಿ ರೋವನ್ ಡಿ’ಕೋಸ್ತ, ಜಿ.ಸುಂದರ್ ಶೆಟ್ಟಿ, ನಿತೇಶ್ ಡಿ’ಕೋಸ್ತ ಹಾಗೂ ಇತರ ಸದಸ್ಯರು ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ರಜತ ಹೆಗ್ಡೆ ಮಾತನಾಡಿ, ಮುಂದಿನ ದಿನಗಳಲ್ಲಿ ಕೈಗೊಳ್ಳುವ ಎಲ್ಲಾ ಕೆಲಸಗಳಿಗೆ ಸದಸ್ಯರ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ(ಆರ್ಥಿಕವಾಗಿ ಹಿಂದುಳಿದ) ಪ್ರೋತ್ಸಾಹ ಧನ ಮತ್ತು ಆರೋಗ್ಯದ ಸಮಸ್ಯೆ ತೊಂದರೆಯಿಂದ ಬಳಲುತ್ತಿದ್ದ ಇಬ್ಬರಿಗೆ ವೈದ್ಯಕೀಯ ಸಹಾಯ ನೀಡಲಾಯಿತು.
ಹೆಚ್.ಬಾಲಕೃಷ್ಣ ಶೆಟ್ಟಿ, ಬೋಜನಾಥ್ ಶೆಟ್ಟಿ, ಸುಜಯ್ ಶೆಟ್ಟಿ, ಜಯಕರ್ ಶೆಟ್ಟಿ, ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.

ಮಾಥ್ಯು ಜೊಸೆಫ್ ಸ್ವಾಗತಿಸಿದರು, ವಿಲ್ಫ್ರೇಡ್ ಮೆನೆಜಸ್ ವಾರ್ಷಿಕ ವರದಿ ವಾಚಿಸಿದರು. ಸೀತಾರಾಮ ಶೆಟ್ಟಿ ವಂದಿಸಿದರು. ಗ್ರೇಟ್ಟ್ ಡಿ’ಕೋಸ್ತ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here