ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬೈಂದೂರು ಹೇನ್ಬೇರುವಿನ ನಿರ್ಜನ ಪ್ರದೇಶದಲ್ಲಿ ಕಾರಿನೊಂದಿಗೆ ವ್ಯಕ್ತಿ ಸುಟ್ಟು ಕರಕಲಾಗಿರುವ ಘಟನೆಗೆ ಬಿಗು ತಿರುವು ದೊರಕಿದ್ದ ಕೊಲೆಗಾರ ತಾನು ಬಚವಾಗಲು ಅಮಾಯಕ ವ್ಯಕ್ತಿಯನ್ನು ತನ್ನ ಕಾರಿನೊಳಗೆ ಬೆಂಕಿಹಾಕಿ ಸಾಯಿಸಿರುವುದಾಗಿ ತಿಳಿದು ಬಂದಿದೆ. ಕಾರಿನೊಳಗೆ ಗುರುತು ಹಿಡಿಯದಷ್ಟು ಸುಟ್ಟು ಹೋಗಿರುವ ವ್ಯಕ್ತಿಯನ್ನು ಕಾರ್ಕಳ ಪರಿಸರದ ನಿವಾಸಿ ಮೇಸ್ತ್ರೀ ಕೆಲಸ ಮಾಡುತ್ತಿದ್ದ ಆನಂದ ದೇವಾಡಿಗ (55ವ) ಎಂದು ಗುರುತಿಸಲಾಗಿದೆ.
ಮೃತ ಆನಂದ ದೇವಾಡಿಗ
ಕೊಲೆಗೆ ಕಾರಣನಾದ ವ್ಯಕ್ತಿಯನ್ನು ಕಾರ್ಕಳ ತಾಲೂಕು ಮಾಳ ಗ್ರಾಮದ ಖಾಸಗಿ ಸರ್ವೇಯರ್ ಸದಾನಂದ ಶೇರೆಗಾರ್ (54ವ), ಕೃತ್ಯಕ್ಕೆ ಸಹಕರಿಸಿದ ಹಿರ್ಗಾನ ಶಿವನಗರ ನಿವಾಸಿ ಶಿಲ್ಪಾ (30ವ) ಎಂಬಾಕೆಯನ್ನು ಬಂಧಿಸಲಾಗಿದೆ.
ಘಟನೆ ಸಂಬಂದ ತನಿಖೆ ಆರಂಭಿಸಿದ ಬೈಂದೂರು ಪೊಲೀಸರು ಕೊಲೆಯ ಸೂತ್ರದಾರ ಸದಾನಂದ ಶೇರೆಗಾರ್, ಓರ್ವ ಮಹಿಳೆ ಸಹಿತ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಈ ಕೊಲೆ ಪ್ರಕರಣ ಸಿನಿಮೀಯ ರೀತಿಯಲ್ಲಿದ್ದು ಖಾಸಗಿ ಸರ್ವೇಯರ್ ಆಗಿದ್ದ ಸದಾನಂದ ಶೇರುಗಾರ್ ಹಣ ಹಾಗೂ ಅವ್ಯಹಾರದಲ್ಲಿ ಸಿಲುಕಿಕೊಂಡಿದ್ದು ಅದರಿಂದ ಬಚವಾಗಲು ತಾನು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋದ ಕಥೆ ಕಟ್ಟಲು ಈ ನಾಟಕ ರೂಪಿಸಿದ್ದ. ಅದಕ್ಕೆ ಪೂರಕವಾಗಿ ಒಂದು ಮಂಗಳವಾರ ಮಧ್ಯಾಹ್ನ ತನ್ನ ಸ್ನೇಹಿತೆ ಶಿಲ್ಪಾ ಎಂಬಾಕೆಯ ಸಹಾಯ ಕೇಳಿದ್ದ. ಶಿಲ್ಪಾ ತನ್ನ ಪರಿಚಿತ ವ್ಯಕ್ತಿ ಮೇಸ್ತ್ರೀ ಆನಂದ ದೇವಾಡಿಗ ಎನ್ನುವಾತನನ್ನು ಬಾರ್‍ಗೆ ಬರುವಂತೆ ತಿಳಿಸಿದ್ದು, ಬಾರ್ ನಲ್ಲಿ ಮೇಸ್ತ್ರೀ ಆನಂದ ದೇವಾಡಿಗ ಎನ್ನುವಾತನಿಗೆ ಚೆನ್ನಾಗಿ ಕುಡಿಸಿದ್ದಾರೆ. ಮದ್ಯದಲ್ಲಿ ನಿದ್ರೆ ಮಾತ್ರೆಯನ್ನು ಬೆರೆಸಿದ್ದರು. ಆನಂದ ದೇವಾಡಿಗನನ್ನು ತನ್ನ ಕಾರಿನಲ್ಲಿ ಹಾಕಿಕೊಂಡು ಇವರು ಬೈಂದೂರಿನತ್ತ ಹೊರಟಿದ್ದರು. ರಾತ್ರಿ 12.30 ಗಂಟೆಯ ಸುಮಾರಿಗೆ ಕಾರು ಸಾಸ್ತಾನ ಟೋಲ್‍ಗೇಟ್‍ನಲ್ಲಿ ಮಹಿಳೆ ಟೋಲ್ ಪಾವತಿಸಿದ್ದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಬೈಂದೂರು ಹೆನ್‍ಬೇರುವಿನಲ್ಲಿ ಕಾರಿಗೆ ಪೆಟ್ರೋಲ್ ಹಾಕಿ ಬೆಂಕಿ ಹಾಕಿ ಇವರು ಮರಳಿದ್ದು, ಅವರನ್ನು ಸದಾನಂದ ಸೇರುಗಾರನ ಸಂಬಂಧಿಕರು ಅಲ್ಲಿಂದ ಕರೆದುಕೊಂಡು ಹೋಗಿ ಬೆಂಗಳೂರು ಬಸ್‍ಗೆ ಹತ್ತಿಸಿದ್ದಾರೆ.
ತಾನು ಆತ್ಮಹತ್ಯೆ ಮಾಡಿಕೊಂಡೇ ಎಂದು ನಂಬಿಸುವ ಸಲುವಾಗಿ ಹಂತಕರು ಬೆಂಗಳೂರಿಗೆ ಹೊರಟಿದ್ದು ದುರದೃಷ್ಟವಶಾತ್ ಬಸ್ ಹಾಳಾಗಿ ಮೂಡಬಿದ್ರೆಯಿಂದ ಆತ ಮರಳಿ ಕಾರ್ಕಳಕ್ಕೆ ಬರುವಾಗ ಪೊಲೀಸರು ಸದಾನಂದ ಶೇರುಗಾರ ಹಾಗೂ ಶಿಲ್ಪರನ್ನು ಬಂಧಿಸಿದ್ದಾರೆ.
ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಎ.ಎಸ್.ಪಿ ಸಿದ್ಧಲಿಂಗಯ್ಯ, ಡಿ.ವೈ.ಎಸ್.ಪಿ ಶ್ರೀಕಾಂತ್, ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಅವರ ನೇತೃತ್ವದಲ್ಲಿ ಪಿಎಸ್‍ಐ ಪವನ್ ನಾಯಕ್,ಗಂಗೊಳ್ಳಿ ಠಾಣೆಯ ಪಿಎಸ್‍ಐ ವಿನಯ ಕೊರ್ಲಹಳ್ಳಿ, ಕಾನ್ಸಟೇಬಲ್ ಗಳಾದ ನಾಗೇಂದ್ರ, ಮೋಹನ, ಕೃಷ್ಣ, ಶ್ರೀಓಧರ, ಫ್ರಿನ್ಸ್, ಚಂದ್ರ ಗಂಗೊಳ್ಳೀ, ಚಾಲಕ ಚಂದ್ರಶೇಖರ, ಸುಜಿತ್, ಶ್ರೀನಿವಾಸ, ಶಾಂತಾರಾಮ ಶೆಟ್ಟಿ ಕಾರ್ಯಚರಣೆಯಲ್ಲಿ ಸಹಕರಿಸಿದ್ದರು.
ಬುಧವಾರ ಬೆಳಿಗ್ಗೆ ಹೆನ್‍ಬೇರುವಿನಲ್ಲಿ ಸಂಪೂರ್ಣ ಸುಟ್ಟುಹೋದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ಅದರಲ್ಲಿ ಗುರುತು ಹಿಡಿಯಲು ಅಸಾಧ್ಯವಾದ ರೀತಿಯಲ್ಲಿ ವ್ಯಕ್ತಿಯೋರ್ವರ ಕಳೇಬರಹ ಪತ್ತೆಯಾಗಿತ್ತು. ಪ್ರಕರಣವನ್ನು ಬೇದಿಸಲು ಹೊರಟ ಪೊಲೀಸರು ಪ್ರಾರಂಭದಲ್ಲಿ ಕಾರಿನ ಚೆಸ್ಸಿ ನಂಬರ್ ಫೊರೆನ್ಸಿಕ್ ತಜ್ಞರ ಸಹಕಾರದಲ್ಲಿ ಪತ್ತೆ ಹಚ್ಚಿ ಆ ಆಧಾರದಲ್ಲಿ ಕಾರಿನ ಮಾಲಕರ ಪತ್ತೆ ºಚ್ಚಿದ್ದರು. ಕಾರು ಸದಾನಂದ ಸೇರುಗಾರ್ ಸೇರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿತ್ತು. ಸಾಸ್ತಾನ ಟೋಲ್ ಗೇಟ್‍ನಲ್ಲಿ ರಾತ್ರಿ 12.30ಕ್ಕೆ ಈ ಕಾರಿನಿಂದ ಮಹಿಳೆ ಟೋಲ್ ಪಾವತಿಸಿರುವುದು ದೃಢ ಪಟ್ಟಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆದು ಒಂದೇ ದಿನದಲ್ಲಿ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.