ಶಿರೂರು ಟೋಲ್‌ ಗೇಟ್ ನಲ್ಲಿ ಪಲ್ಟಿಯಾದ ಅಂಬ್ಯುಲೆನ್ಸ್‌ – ನಾಲ್ವರು ಮೃತ್ಯು : ನಾಲ್ವರಿಗೆ ಗಾಯ

0
540

ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಹೊನ್ನಾವರ ಕಡೆಯಿಂದ ಅತೀ ವೇಗವಾಗಿ ಬಂದ ಅಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಭೀಕರ ಘಟನೆ ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ.

ಘಟನೆಯಲ್ಲಿ ಹೊನ್ನಾವರದ ನಿವಾಸಿಗಳಾದ ಗಜಾನನ ಗಣಪತಿ ನಾಯ್ಕ್ ಹಾಗೂ ಅವರ ಸಂಬಂದಿಗಳಾದ ಮಂಜುನಾಥ ನಾಯ್ಕ್, ಜೋತಿ ನಾಯ್ಕ್, ಲೋಕೇಶ್ ನಾಯ್ಕ್ ರವರು ಮೃತ ಪಟ್ಟಿರುತ್ತಾರೆ.

Click Here

ಅಂಬುಲೆನ್ಸಿನಲ್ಲಿದ್ದ ಶಶಾಂತ್ ನಾಯಕ್, ಗೀತಾ, ಗಣೇಶ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕೊಂಡೊಯ್ಯಲಾಗಿದೆ.

ಅಂಬ್ಯುಲೆನ್ಸ್ ಚಾಲಕ ರೋಷನ್ ರೋಡ್ರಿಗಸ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬ್ಯಾರಿಕೇಡ್ ಸರಿಸಲು ಹೊದ ಟೋಲ್ ಸಿಬ್ಬಂದಿಗೆ ಸಂಬಾಜೆ ಗೋರ್ಪಡೆ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಜಾನನ ನಾಯ್ಕ್ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಕುಟುಂಬಿಕರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಾಟ ಮಾಡುತ್ತಿದ್ದ ಅಂಬ್ಯುಲೆನ್ಸ್ ವಾಹನ ಶಿರೂರು ಟೋಲ್ ಪ್ಲಾಝಾ ಬಳಿಗೆ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆಯಲ್ಲಿ ಟೋಲ್ ಪ್ಲಾಝಾದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಬ್ಯಾರಿಕೇಟ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಆದರೆ ವೇಗವಾಗಿ ಬಂದ ಅಂಬ್ಯುಲೆನ್ಸ್ ಟೋಲ್ ಫ್ಲಾಝಾದಲ್ಲಿನ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದಿದೆ. ಅಬ್ಸುಲೆನ್ಸ್ ತಿರುಗಿ ಮಗುಚಿ ಬಿದ್ದಿದ್ದು, ಅಫಘಾತದ ರಭಸಕ್ಕೆ ಹಿಂಬದಿಯ ಬಾಗಿ ತೆಗೆದು ರೋಗಿ ಸೇರಿದಂತೆ ಅದರೊಳಗಿದ್ದ ಎಲ್ಲರೂ ಹೊರಕ್ಕೆಸೆಯಲ್ಪಟ್ಟಿದ್ದಾರೆ.

ಗಾಯಗೊಂಡವರನ್ನು ಟೋಲ್ ಸಿಬ್ಬಂದಿಗಳು ತಕ್ಷಣ ಟೋಲ್ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಕೊಂಡೊಯ್ದಿದ್ದಾರೆ.

LEAVE A REPLY

Please enter your comment!
Please enter your name here