ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಸಾಹಿತ್ಯ ಸಂಘ ವೇದಿಕೆ ಸಹಕಾರಿ – ಸವಿತಾ ಶಾಸ್ತ್ರಿ ಗುಂಡ್ಮಿ

0
509

ಸಾಹಿತ್ಯ ಸಂಘ ಉದ್ಘಾಟನಾ ಕಾರ್ಯಕ್ರಮ
ಕುಂದಾಪುರ ಮಿರರ್ ಸುದ್ದಿ…

ಕೋಟ : ವಿವೇಕ ಪ.ಪೂ.ಕಾಲೇಜಿನ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಎಂ.ಜಿ.ಎಂ. ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.

Click Here

Click Here

ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಪತಿನಿಧಿ ಸವಿತಾ ಶಾಸ್ತ್ರಿ ಗುಂಡ್ಮಿ ಉದ್ಘಾಟಿಸಿ “ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆಯಿರುತ್ತದೆ. ಅದು ಅನಾವರಣೆಗೊಳ್ಳಲು ಸಾಹಿತ್ಯ ಸಂಘದ ಮೂಲಕ ವೇದಿಕೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗಿಸಿಕೊಳ್ಳಬೇಕು. ಮೊದಲಿಗೆ ಒಳ್ಳೆಯ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ನಮ್ಮ ನಿಜವಾದ ಮಿತ್ರರಂತೆ. ಓದುವ ಅಭ್ಯಾಸದಿಂದ ಶಬ್ದ ಜ್ಞಾನ, ವಿಷಯ ಜ್ಞಾನ ಉಂಟಾಗುತ್ತದೆ. ಹಾಗೇ ವಿದ್ಯಾರ್ಥಿಗಳು ಸಣ್ಣ ಕವಿತೆ, ಕಥೆ, ನಾಟಕಗಳನ್ನು ನಿಧಾನವಾಗಿ ರಚಿಸುವ ಅಭ್ಯಾಸವನ್ನು ಮಾಡಿಕೊಂಡಲ್ಲಿ ತಮ್ಮನ್ನು ಸಮಾಜಮುಖಿಯಾಗಿ ತೆರೆದುಕೊಳ್ಳಲು ಸಾಧ್ಯ” ಎಂದು ತಿಳಿಸಿದರು.

ಸಾಹಿತ್ಯ ಸಂಘದ ಕಾರ್ಯದರ್ಶಿ ಸಮೀಕ್ಷಾ, ಜೊತೆ ಕಾರ್ಯದರ್ಶಿ ಪೂರ್ವಿ ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ ಉಪಾಧ್ಯ ವಂದಿಸಿದರು. ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡ ಪ್ರಾಸ್ತಾವಿಕವಾಗಿ ಪರಿಚಯಿಸಿ ಸ್ವಾಗತಿಸಿದರು.

ಸಾಹಿತ್ಯ ಸಂಘದ ಸಂಚಾಲಕ ಚಂದ್ರಶೇಖರ ಎಚ್.ಎಸ್. ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here