ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಅಘೋರೇಶ್ವರ ಮೆಲೋಡಿಸ್ ಕೋಟ ಇದರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತವಾಗಿ ಧ್ವನಿ ಸಿರಿ 2022 ಸಂಗೀತ ಸ್ಪರ್ಧೆ ಸಂಗೀತ ಪ್ರತಿಭೆಗಳ ಅನಾವರಣ ಕಾರ್ಯಕ್ರಮ ಕೋಟದ ಸಮೂದ್ಯತಾ ಬ್ಯಾಕ್ವೆಂಟ್ ಹಾಲ್‍ನಲ್ಲಿ ಇತ್ತೀಚಿಗೆ ನಡೆಯಿತು.
ಸಭಾ ಕಾರ್ಯಕ್ರಮವನ್ನು ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಘೋರೇಶ್ವರ ಮೆಲೋಡಿಸ್ ಕೋಟ ಸಂಚಾಲಕ ರವಿ ಬನ್ನಾಡಿ ವಹಿಸಿದ್ದರು.
ದಶಮಾನೋತ್ಸವ ಸಂಭ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ನರೇಂದ್ರ ಕುಮಾರ್ ಕೋಟ, ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ನಿರ್ದೇಶಕ ಡಾ.ಸತೀಶ್ ಪೂಜಾರಿ, ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು ದಿನೇಶ್ ಗಾಣಿಗ ಕೋಟ ಇವರುಗಳನ್ನು ಸನ್ಮಾನಿಸಲಾಯಿತು. ಶ್ರೀ ಅಘೋರೇಶ್ವರ ಮೆಲೋಡಿಸ್ ಧ್ವನಿ ಸಿರಿ 2022 ಗೌರವ ಪುರಸ್ಕಾರಕ್ಕೆ ಶ್ರೀ ಉಧ್ಭವಲಿಂಗೇಶ್ವರ ಭಜನಾ ಮಂದಿರ ಮಣೂರು ಪಡುಕೆರೆ, ಗುರುಮಾರುತಿ ಹೌಂದೆರಾಯನ ಕುಣಿತ ಭಜನಾ ಮಂಡಳಿ ಸಾಲಿಗ್ರಾಮ, ಶ್ರೀ ರಾಮಾಮೃತ ಭಜನಾ ಸಂಘ ಕೋಟ ಸಾಧನೆಯ ಪುರಾಸ್ಕಾರ ನೀಡಿ ಗೌರವಿಸಲಾಯಿತು. ಧ್ವನಿ ಸಿರಿ 2022 ಸಂಗೀತ ಸ್ಪರ್ಧೆ ಸುಮಾರು ಒಂದು ತಿಂಗಳ ಹಿಂದೆ ಆನ್ಲೈನ್ ಆಡಿಷನ್ ನಡೆಸಿದ್ದು,ಜಿಲ್ಲೆಯ ಮತ್ತು ರಾಜ್ಯದ 85 ಸ್ಫರ್ಧಿಗಳ ಪೈಕಿ 30ಜನರನ್ನು ಸೆಮಿಫೈನಲ್‍ಗೆ ಆಯ್ಕೆ ಮಾಡಲಾಗಿತ್ತು.ಸೆಮಿಫೈನಲ್‍ಗೆ ಆಯ್ಕೆಯಾದ ಸ್ಪರ್ಧಿಗಳಿಗೆ,ಇದೇ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಲಾಯಿತು.30ಜನರ ಪೈಕಿ 24 ಮಂದಿಯನ್ನು ಸ್ಪರ್ಧೆಗೆ ನೊಂದಾಯಿಸಿಕೊಳ್ಳಲಾಯಿತು.ತೀರ್ಪುಗಾರರಾಗಿ ನರೇಂದ್ರ ಕುಮಾರ್ ಕೋಟ ಮತ್ತು ಅಕ್ಷತ ಗಂಗ್ಗೊಳ್ಳಿ ಅಂತಿಮಸರ್ಧಾಳುಗಳನ್ನು ಆಯ್ಕೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ ಕೋಟೆಶ್ವರ ಘಟಕ ಅಧ್ಯಕ್ಷ ಸುನೀಲ್ ಜಿ ನಾಯ್ಕ್, ಜೈ ಕುಂದಾಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಪುಂಡಲೀಕ ಮೊಗವೀರ. ಗೌರವ ಸಲಹೆಗಾರ ಆದಿತ್ಯ ಕೋಟ, ಒಳ್ತೂರು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ಮಾಧವ ಪಿ ಸಾಲಿಗ್ರಾಮ ಮತ್ತಿತರರು ಉಪಸ್ಥಿತರಿದ್ದರು.