ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಳೆದ ಎರಡು ದಿನಗಳಿಂದ ಭಾರಿ ಮಳೆ ಹಿನ್ನೆಲೆ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡದ ಅಂಚಿನಲ್ಲಿರುವ ಶಿರೂರು ಬೈಂದೂರು ಕಳುಹಿತ್ಲು ಕಲ್ಮಕ್ಕಿಯ ಭಾಗದಲ್ಲಿ ಭಾರೀ ಮಳೆಯಿಂದ ರಾತ್ರಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ .
ರಾಜ್ಯ ಹೆದ್ದಾರಿ, ಕೆಲವು ಶಾಲೆಯ ಎದುರುಗಡೆ ಸಂಪೂರ್ಣ ಮುಳುಗಡೆಯಾಗಿದೆ ಯಾವುದೇ ವಾಹನ ಸಂಚಾರ ಇಲ್ಲದೆ ಸ್ಥಗಿತಗೊಂಡಿದೆ.
ಹಲವಾರು ಮನೆಗಳು ರಸ್ತೆ ಸಂಪರ್ಕವನ್ನೇ ಕಳೆದುಕೊಂಡಿದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಕುಂದಾಪುರ ಮತ್ತು ಬೈಂದೂರು ತಾಲೂಕಿಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನದಿಯ ತೀರದಲ್ಲಿರುವ ದೋಣಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದೆ. ಸುಮಾರು 30ಕ್ಕೂ ಹೆಚ್ಚು ದೋಣಿಗಳು ಹಾನಿಗೀಡಾದೆ.
ಸ್ಥಳಕ್ಕೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು. ಕುಂದಾಪುರ ತಹಶಿಲ್ದಾರ ಕಿರಣ್ ಗೌರಯ್ಯ ಭೇಟಿ ನೀಡಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆ, ಸ್ಥಳೀಯರು ನೆರವಾಗುತ್ತಿದ್ದಾರೆ.